ನ್ಯೂಸ್ ನಾಟೌಟ್: ಬಾಲಿವುಡ್ ಪವರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು.ಇದಾದ ಬಳಿಕ ತಮ್ಮ ಮುದ್ದು ಕಂದಮ್ಮಗೆ ‘ದುವಾ ಪಡುಕೋಣೆ ಸಿಂಗ್’ ಎಂದು ನಾಮಕರಣ ಮಾಡಿದ್ದರು.ಸೆಪ್ಟೆಂಬರ್ 8, 2024 ರಂದು, ದೀಪಿಕಾ ಮುಂಬೈನ HN ರಿಲಯನ್ಸ್ ಆಸ್ಪತ್ರೆಯಲ್ಲಿ ತನ್ನ ಮಗಳಿಗೆ ಜನ್ಮ ನೀಡಿದ್ದು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೀಪಿಕಾ ಮತ್ತು ರಣವೀರ್ ಲಕ್ಷ್ಮಿಯನ್ನು ತಮ್ಮ ಮನೆಗೆ ಸ್ವಾಗತಿಸಿದರು.
ಅದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದುವಾ ಫೋಟೋ ಎನ್ನಲಾದ ಹಲವಾರು ಫೋಟೋಗಳು ವೈರಲ್ ಆಗಿದ್ದವು. ಆದರೆ ಆ ಫೋಟೋಗಳು ಯಾವುದು ನಿಜ ಆಗಿರಲಿಲ್ಲ.ಅದರಂತೆ ಇದೀಗ ಮತ್ತೆ ಕೆಲವೊಂದಷ್ಟು ಫೋಟೋಗಳು ವೈರಲ್ ಆಗಿದ್ದು, ದೀಪಿಕಾ ಮಗುವಿನ ಫೋಟೋ ಎನ್ನಲಾಗಿದೆ. ಆದರೆ ಸರಿಯಾಗಿ ಗಮನಿಸಿದರೆ ಅದು ಎಐ ಜನರೇಟೆಡ್ ಫೋಟೋ ಎಂದು ಗೊತ್ತಾಗುತ್ತಿದೆ.ಮಗು ಜನಿಸಿ ೮ ತಿಂಗಳಾದರೂ ಸಹ ದೀಪಿಕಾ ಮತ್ತು ರಣವೀರ್ ತಮ್ಮ ಮನೆಗೆ ಪುಟ್ಟ ದೇವತೆಯ ಫೋಟೋವನ್ನು ಎಲ್ಲೂ ರಿವೀಲ್ ಮಾಡಿಲ್ಲ. ಆದರೆ ಮಗುವಿನ ಹೆಸರು ರಿವೀಲ್ ಮಾಡುವ ಸಂದರ್ಭದಲ್ಲಿ ಪುಟ್ಟ ಕಾಲುಗಳ ಫೋಟೋವನ್ನಷ್ಟೇ ಶೇರ್ ಮಾಡಿದ್ದರು ಈ ಜೋಡಿ. ಆದರೂ ನೆಟ್ಟಿಗರು ಮಾತ್ರ ಈ ಇದೇ ನಿಜ ಫೋಟೋವೆಂದು ಅಂದು ಕೊಂಡು ಕ್ಯೂಟ್ ಬೇಬಿ, ದೀಪಿಕಾ ಥರಾನೇ ಇದೆ ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
View this post on Instagram