ಕ್ರೈಂ

ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ, ನಾಲ್ವರು ಸಾವು

ಕಾರ್ಕಳ: ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಮೃತಪಟ್ಟ ನಾಲ್ವರು ಕಾರ್ಕಳದ ಮಿಯ್ಯಾರಿನವರು ಎಂದು ತಿಳಿದುಬಂದಿದೆ. ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 9 ನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಸಾವನಪ್ಪಿದ್ದು, ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಮಣಿಪಾಲು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗುಂಬೆ ಹಾಗು ಹೆಬ್ರಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಮೇಲಕ್ಕೆತ್ತಲು ಸ್ಥಳೀಯರು ಸಹಕರಿಸಿದ್ದಾರೆ.

Related posts

” ಅವನು ಸತ್ತೋಯ್ತಾನೆ ಅಂತ ಯೋಚ್ನೆ ಮಾಡ್ತಾ ಇದ್ದೀಯಲ್ಲಾ, 1.5 ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?” ಕಾರಿಗೆ ಗುದ್ದಿದ ಬೈಕ್‌ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ್ರಾ ಭವಾನಿ ರೇವಣ್ಣ? ಸ್ಥಳೀಯರು ಹೇಳಿದ್ದೇನು?

“ಸರ್ ಅನ್ಬೇಡ.. ಬಿಎಫ್ ಎನ್ನು”ವಂತೆ ವಿದ್ಯಾರ್ಥಿನಿಯನ್ನು ಪೀಡಿಸಿದ ಶಿಕ್ಷಕ! ಕಾಮುಕ ಶಿಕ್ಷಕನ ಆಡಿಯೋ, ಮೆಸಜ್ ವೈರಲ್!

ಅಮೇರಿಕದ ಶಾಪ್‌ ನಲ್ಲಿ ಭಾರತೀಯ ವಿದ್ಯಾರ್ಥಿನಿಯರಿಂದ ಕಳ್ಳತನ..! ವಿಸಾದ ಮೇಲೆ ಮತ್ತಷ್ಟು ಕಠಿಣ ನಿಯಮಗಳ ಸಾಧ್ಯತೆ, ಇಲ್ಲಿದೆ ವಿಡಿಯೋ