Latestಉಡುಪಿಕರಾವಳಿ

ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ..! ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ..!

855

ನ್ಯೂಸ್ ನಾಟೌಟ್ :ಭಾರೀ ಮಳೆಯಿಂದ ಭೂ ಕುಸಿತ ಸಾಧ್ಯತೆಯ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಭಾರೀ ಗಾತ್ರ ಮತ್ತು ತೂಕದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಆಗುಂಬೆ ಘಾಟಿ 169ಎ ಹೆದ್ದಾರಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿದ್ದು, ಭಾರೀ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಲ್ಪೆ – ಆಗುಂಬೆ ಹೆದ್ದಾರಿ ರಸ್ತೆಯಾಗಿರುವ ಆಗುಂಬೆ ಘಾಟಿಯಲ್ಲಿ ಮಳೆಯಿಂದ ಭೂ ಕುಸಿತ ಸಾಧ್ಯತೆ ಹಿನ್ನೆಲೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶ ನೀಡಿದ್ದಾರೆ.

ಭಾರೀ ವಾಹನಗಳು ಉಡುಪಿ – ಕುಂದಾಪುರ – ಸಿದ್ದಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದು, ಆಗುಂಬೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ.

ವಿಮಾನ ದುರಂತದಲ್ಲಿ ಕ್ಯಾಪ್ಟನ್‌ ಸುಮಿತ್‌ ನ ಕೊನೆ ಕ್ಷಣದ ಆಡಿಯೋ ಲಭ್ಯ..! ಅಷ್ಟಕ್ಕೂ ವಿಮಾನದೊಳಗೆ ನಡೆದದ್ದೇನು..?

ವಿಮಾನ ದುರಂತದಲ್ಲಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆ‌ ಎದುರು ಪ್ರೇಮಿಯ ಆಕ್ರಂದನ..! ಮನಕಲಕುವ ವಿಡಿಯೋ ವೈರಲ್

See also  ನಡೆದುಕೊಂಡು ಹೋಗುತ್ತಿದ್ದ ವೇಳೆ ಹೃದಯಾಘಾತ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget