ಕೃಷಿ ಸಂಪತ್ತು

ನಿಮ್ಮ ಬೆಳೆಗಳು ರೋಗ ಮತ್ತು ಕೀಟಗಳಿಂದ ಸುರಕ್ಷಿತವಾಗಿರಬೇಕೆ? ಇಂದೇ ಈ ವಿಧಾನ ಪಾಲಿಸಿ

194
Spread the love

ನ್ಯೂಸ್ ನಾಟೌಟ್ : ನಮ್ಮ ದೇಶ ಕೃಷಿಯನ್ನೇ ಅವಲಂಭಿಸಿದೆ. ನಾವೆಲ್ಲರೂ ಅನ್ನದಾತನ ಮಕ್ಕಳು. ಇತ್ತೀಚೆಗೆ ಅನ್ನ ಕೊಡುವ ರೈತನಿಗೆ ಪ್ರತಿದಿನ ಕೃಷಿ ಭೂಮಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಅಂತಹ ರೈತನ ಸಮಸ್ಯೆಗಳಿಗೆ ಕೊನೆ ಎಂಬುದೇ ಇಲ್ಲ. ಪ್ರತಿನಿತ್ಯ ಬೆಳೆ ನಾಶ, ಕೀಟಗಳ ಉಪದ್ರದಿಂದ ರೈತ ಹೈರಾಣಾಗಿದ್ದಾನೆ. ಇದೀಗ ರೈತನ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ.

ಕೆಲವರು ಜೀವನೋಪಾಯಕ್ಕೆ ಅಡಿಕೆ , ಭತ್ತ, ತೆಂಗು ,ಕೊಕ್ಕೊ , ಬಾಳೆ, ವ್ಯವಸಾಯ ಹಣ್ಣು -ತರಕಾರಿ ಕೃಷಿಯನ್ನೇ ಅವಲಂಬಿಸಿರುತ್ತಾರೆ. ಈ ಬಹುತೇಕ ಹಿಂಗಾರು -ಮುಂಗಾರು ಬೆಳೆಗಳಿವೆ. ಆದರೆ ಕೀಟಗಳಿಂದ ಬರುವ ರೋಗಗಳನ್ನು ತಡೆಯಲು ಕೃಷಿ ತಂತ್ರಜ್ಞಾನವು ಈ ಕೆಳಗಿನ ರೋಗ ನಿರ್ವಣೆಗೆ ಹೊಸ ಕ್ರಮವನ್ನು ಮಾಡಿದ್ದಾರೆ.

ಕೀಟ ಹಾಗೂ ರೋಗ ನಿರ್ವಹಣೆ ಕ್ರಮ:

ಒಂದು ಕಿ.ಗ್ರಾಂ ಬೀಜಕ್ಕೆ ೨ ಗ್ರಾಂ ಗಂಧಕ ಅಥವಾ ಕ್ಯಾಪ್ಟಾನ್ ೮೦ ಡಬ್ಲೂಪಿ ಅಥವಾ ೨ ಗ್ರಾಂ ಥೈರಾಮ್ ೭೫ ಡಬ್ಲೂಪಿ. ಲೇಪನ ಮಾಡಿ ಬಿತ್ತನೆ ಮಾಡಬೇಕು. ಕೊಯ್ಲ ಮಾಡುವ ಮೊದಲು ಕಾಡಿಗೆ ರೋಗ ಪೀಡಿತ ತೆನೆಗಳನ್ನು ಗುರುತಿಸಿ ಆಯ್ದು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.

ಈ ಕೀಟದ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಮತ್ತು ಗೋವಿನ ಜೋಳದಲ್ಲಿ ಕಂಡುಬಂದಿರುವುದರಿಂದ, ರೈತರು ಈ ಕೀಟದ ನಿರ್ವಹಣೆಗೆ ೦.೩ ಗ್ರಾಂ. ಇಮಾಮೆಕ್ಟಿನ್ ಬೆಂಜೋಯೆಟ್ ೫ ಲೀ. ಅಥವಾ .೨ ಮಿ. ಲೀ, ಸ್ಪೈನೋಸ್ಯಾಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಾಯಂಕಾಲದ ಹೊತ್ತಿನಲ್ಲಿ ಸಿಂಪರಣೆ ಮಾಡಿ ಕೀಟದ ನಿರ್ವಹಣೆ ಮಾಡಬೇಕು. ಬೆಳೆಯು ಎತ್ತರವಿದ್ದಾಗ ಕಳಿತ ಪಾಷಾಣವನ್ನು ೫೦ ಕಿ.ಗ್ರಾಂ. ದಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.

೪ ಕಿ.ಗ್ರಾಂ ಬೆಲ್ಲ, ೨೫೦ಮಿ.ಲೀ ಮೊನೋಕ್ರೋಟೊಫಾಸ್ ೩೬ ಎಸ್.ಎಲ್, ೫-೮ ಲೀಟರ್ ನೀರು ಹಾಗೂ ೫೦ ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ ೪೮ ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು.

ಈ ಕೀಟಗಳ ನಿರ್ವಹಣೆಗೆ ೦.೫ ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ ೧ ಗ್ರಾಂ ಆಸಿಫೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಂಪಡಿಸಬೇಕು.

ಕುಸುಬೆ ಬೆಳೆಯಲ್ಲಿ ಎಲೆ ತಿನ್ನುವ ಹುಳು ಬಾಧೆ ಕಂಡು ಬಂದಲ್ಲಿ ನಿರ್ವಹಣೆಗೆ ೨ ಮಿ.ಲೀ ಕ್ವಿನಾಲ್‍ಫಾಸ್ ಅಥವಾ ೫ ಮಿ.ಲೀ ಲ್ಯಾಮಡಾಸೈಲೋಥ್ರಿನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು..

ರೋಗವು ಕಾಣಿಸಿಕೊಂಡ ಕೊಡಲೇ ೨ ಗ್ರಾಂ ಮ್ಯಾಂಕೊಜೆಬ್ ೭೫ ಡಬ್ಲು.ಪಿ. ಶಿಲೀಂದ್ರನಾಶಕವನ್ನು ಅಥವಾ ೧ ಮಿ.ಲೀ ಹೆಕ್ಸಾಕೋನಾಜೋಲ್ ೫% ಇ.ಸಿ. ಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಂಪರಣೆ ಮಾಡಬೇಕು. ರೋಗದ ತೀವ್ರತೆಗೆ ಅನುಗುಣವಾಗಿ ೧೫ ದಿನಗಳ ಅಂತರದಲ್ಲಿ ಈ ಸಿಂಪರಣೆ ಕೈಗೊಳ್ಳಬೇಕು.

ನಿಗದಿತ ಸಮಯದಲ್ಲಿ ಅಂದರೆ ಅಕ್ಟೋಬರ್ ೧ನೇ ಹಾಗೂ ೨ನೇ ವಾರದಲ್ಲಿ ಬಿತ್ತನೆ ಮಾಡಿದಲ್ಲಿ ಈ ರೋಗದ ಬಾಧೆಯು ಕಡಿಮೆಯಾಗುವುದು. ಬಿತ್ತನೆಗೆ ರೋಗ ನಿರೋಧಕ ತಳಿಗಳನ್ನು ಉಪಯೋಗಿಸುವುದು. ಎಲೆ ತುಕ್ಕುರೋಗ ಕಂಡ ತಕ್ಷಣ ೧ ಮಿ.ಲೀ ಪ್ರೊಪಿಕೋನ್‍ಜೋಲ್ ೨೫ ಇ ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರೋಗದ ತ್ರೀವ್ರತೆಗೆ ಅನುಗುಣವಾಗಿ ೧೫ ದಿನಗಳ ಅಂತರದಲ್ಲಿ ಎರಡನೆಯ ಸಿಂಪರಣೆ ಮಾಡಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ.

  Ad Widget   Ad Widget   Ad Widget   Ad Widget   Ad Widget   Ad Widget