Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

6 ತಿಂಗಳ ಕಂದನನ್ನು ಹಿಡಿದು ಅಗ್ನಿ ಕುಂಡ ತುಳಿಯುವಾಗ ಜಾರಿ ಬಿದ್ದ ತಂದೆ..! ವಿಡಿಯೋ ವೈರಲ್

1k

ನ್ಯೂಸ್ ನಾಟೌಟ್: ಮಕ್ಕಳನ್ನು ಎತ್ತಿಕೊಂಡು ಅಗ್ನಿ ಕುಂಡ ತುಳಿಯೋದು ಅಷ್ಟು ಸುಲಭದ ಮಾತಲ್ಲ. ಇಲ್ಲೊಬ್ಬ ತಂದೆ ಕೇವಲ 6 ತಿಂಗಳ ಮಗುವನ್ನು ಎತ್ಕೊಂಡು ಅಗ್ನಿ ಕುಂಡ ಪ್ರವೇಶ ಮಾಡಲು ಹೋಗಿದ್ದಾರೆ. ಆದರೆ ಒಂದೇ ಕ್ಷಣಕ್ಕೆ ಪ್ರಾಣ ಸಂಕಟ ಅನುಭವಿಸಿದ್ದಾನೆ.

ಇದು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಳ್ಳಿಪಾಳ್ಯಂನಲ್ಲಿರುವ ಅಗ್ನಿ ಮಾರಿಯಮ್ಮನ್ ದೇವಸ್ಥಾನದಲ್ಲಿ ಆದಂತಹ ಅವಘಡ ಎನ್ನಲಾಗಿದೆ.

ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಅಗ್ನಿ ಕುಂಡ ತುಳಿಯುವ ಉತ್ಸವದಲ್ಲಿ ಕುಮಾರ್ ಅನ್ನೋರು, ತಮ್ಮ 6 ತಿಂಗಳ ಹೆಣ್ಣು ಮಗುವನ್ನು ಎತ್ತಿಕೊಂಡು ಅಗ್ನಿ ಕುಂಡ ಹಾಯೋಕೆ ಮುಂದಾಗಿದ್ದಾರೆ.

ದೇವರನ್ನು ಮನದಲ್ಲಿ ನೆನದು ಅಗ್ನಿ ಕುಂಡ ಹಾಯ್ದಿದ್ದ ಕುಮಾರ್​, ಎರಡು ಹೆಜ್ಜೆ ಇಡುತ್ತಲೇ ಆಯ ತಪ್ಪಿ ಬಿದ್ದಿದ್ದಾರೆ. ಎಪ್ರಿಲ್ 2ಕ್ಕೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಅದೃಷ್ಟವಶಾತ್ ಅಗ್ನಿಕುಂಡದ ಹೊರೆಗೆ ಕುಮಾರ್ ಬಿದ್ದಿದ್ದರಿಂದ ಅನಾಹುತ ತಪ್ಪಿದೆ. ಕುಮಾರ್ ಕೈಯಲ್ಲಿದ್ದ ಮಗುವನ್ನು ನೆರೆದಿದ್ದ ಜನರು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಅರೆಬೆತ್ತಲಾಗಿ ಯುವಕರ ಹುಚ್ಚು ಸಾಹಸ..! ಕೇಸ್ ದಾಖಲು, ವಿಡಿಯೋ ವೈರಲ್

See also  ಮಂಗಳೂರು: ಕಾಂಗ್ರೆಸ್ ನ ಸಾಮೂಹಿಕ ರಾಜೀನಾಮೆ ಸಭೆಯಲ್ಲಿ ಕೋಲಾಹಲ, ಗದ್ದಲ..! ಸಾಮೂಹಿಕ ರಾಜೀನಾಮೆ 1 ವಾರಗಳ ಕಾಲ ಮುಂದೂಡಿಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget