ಕರಾವಳಿಕ್ರೀಡೆ/ಸಿನಿಮಾ

‘ಐಶ್ವರ್ಯಾ ರೈ ಮದುವೆಯಾದ್ರೆ ಸುಂದರವಾದ ಮಕ್ಕಳಾಗುತ್ತವೆಂದು ಭಾವಿಸಿದ್ರೆ ಸಾಧ್ಯವಾಗದ ಮಾತು’ ಪಾಕ್‌ ಮಾಜಿ ಕ್ರಿಕೆಟಿಗ ಹೀಗೆ ಹೇಳಿದ್ಯಾಕೆ?ಅಸಹ್ಯಕರ ಕಾಮೆಂಟ್‌ಗೆ ನೆಟ್ಟಿಗರು ಏನಂದ್ರು?

ನ್ಯೂಸ್ ನಾಟೌಟ್ :  ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಹೆಸರನ್ನು ಪ್ರಸ್ತಾಪಿಸಿ ಸುದ್ದಿಯಲ್ಲಿದ್ದಾರೆ.ಅವರು ಮಾತನಾಡಿರುವ ಅಸಹ್ಯಕರ ಕಾಮೆಂಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.ಪಾಕಿಸ್ತಾನ ಆಡಿದ ಒಂಬತ್ತು ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಗೆದ್ದಿತ್ತು. ಭಾರತದ ವಿರುದ್ಧವೂ  ಹೀನಾಯ ಸೋಲುಂಡಿತ್ತು. ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್  ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ  ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಹೆಸರು ಪ್ರಸ್ತಾಪಿಸಿ ಪೇಚಿಗೆ ಸಿಲುಕಿದ್ದಾರೆ.ಪಾಕ್‌ನ ದಿಗ್ಗಜ ಆಟಗಾರರಾದ ಶಾಹಿದ್ ಅಫ್ರಿದಿ, ಯೂನಿಸ್ ಖಾನ್, ಮಿಸ್ಬಾ ಉಲ್-ಹಕ್, ಉಮರ್ ಗುಲ್, ಸಯೀದ್ ಅಜ್ಮಲ್, ಶೋಯೆಬ್ ಮಲಿಕ್ ಮತ್ತು ಕಮ್ರಾಲ್ ಅಕ್ಮಲ್ ಅವರಂಥ ದಿಗ್ಗಜ ಆಟಗಾರರು ಕೂಡಾ ವೇದಿಕೆ ಮೇಲಿದ್ದಾಗಲೇ ಅಬ್ದುಲ್ ರಜಾಕ್ ಹೇಳಿದ ಹೇಳಿಕೆಯೊಂದು ಬಾರಿ​​ ವೈರಲ್​ ಆಗಿದೆ.

ಅಬ್ದುಲ್ ರಜಾಕ್ ಮಾತನಾಡಿ, “ನಾನು ಪಿಸಿಬಿ ಉದ್ದೇಶವೇನು ಎಂಬುದರ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದೆ ನಾನು ಆಡುತ್ತಿದ್ದಾಗ ನನ್ನ ನಾಯಕ ಯೂನಿಸ್ ಖಾನ್ ಅವರ ಉದ್ದೇಶಗಳು ಉತ್ತಮವಾಗಿವೆ ಎಂದು ನನಗೆ ತಿಳಿದಿತ್ತು. ಹೀಗಾಗಿ ನಾನು ಅತೀವ ಆತ್ಮವಿಶ್ವಾಸ ಮತ್ತು ಧೈರ್ಯದಿಂದ, ಜತೆಗೆ ಅಲ್ಲಾಹುವಿನ ಕೃಪೆಯಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಕೊಡುಗೆ ನೀಡಲು ಸಾಧ್ಯವಾಯ್ತು. ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಆಟಗಾರರ ಪ್ರದರ್ಶನಗಳ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಆಟಗಾರರನ್ನು ತಿದ್ದಿ, ಅವರನ್ನು ಬೆಳೆಸುವ ಉದ್ದೇಶ ನಮಗಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಐಶ್ವರ್ಯಾ ರೈ ಅವರನ್ನು ಮದುವೆಯಾಗಿ ಮತ್ತು ನಂತರ ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ರಜಾಕ್ ಹೇಳಿದ್ದಾರೆ.  ಈ ಹೇಳಿಕೆ  ಕುರಿತಾಗಿ ಆಕ್ರೋಶ ವ್ಯಕ್ತವಾಗಿದೆ.

Related posts

ಸೂಪರ್‌ ಸ್ಟಾರ್‌ ರಜನೀಕಾಂತ್ ಆಸ್ಪತ್ರೆಗೆ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ

ಕೃಷಿ ಭೂಮಿ ಇಲ್ಲದೇ ಟೆರೇಸ್ ನಲ್ಲಿಯೇ ಕೃಷಿ ಬೆಳೆದ ಮಹಿಳೆ,ಕೇವಲ 8 ಸೆಂಟ್ಸ್ ಜಾಗದಲ್ಲಿ ಕೃಷಿಲೋಕವನ್ನೇ ಸೃಷ್ಟಿಸಿದ ಕೃಷಿಕೆ..!ನಗರದಲ್ಲಿಯೇ ಕೃಷಿ ಕ್ರಾಂತಿ ಮಾಡಿದ ಈ ಮಹಿಳೆ ಯಾರು ಗೊತ್ತಾ?

ಕಡಬ: ಸರ್ಕಾರಿ ಶಾಲೆಯಲ್ಲಿ RSS ಗುರುಪೂಜೆ ಆರೋಪ, ಶಾಲೆಯ ಶಿಕ್ಷಕರಿಗೆ ಶೋಕಾಸ್ ನೋಟಿಸ್..!