Latest

ಮೊನಾಲಿಸಾ ಬಳಿಕ ಇದೀಗ ಇಶಿಕಾ ಬಂದ್ಳು ನೋಡಿ..!; ವೈರಲ್ ಬೆಡಗಿಯ ಸಹೋದರಿಗೂ ಜನ ಫಿದಾ!!

758

ನ್ಯೂಸ್‌ ನಾಟೌಟ್: ಮಹಾ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಳ ವೈರಲ್ ಬೆನ್ನಲ್ಲೇ ಇದೀಗ ಆಕೆ ತಂಗಿ ಹಿಂದೆ ಕ್ಯಾಮರಾ ಕಣ್ಣು ಬಿದ್ದಿವೆ. ಮಧ್ಯಪ್ರದೇಶದ ಈ ಸಾಮಾನ್ಯ ಹುಡುಗಿಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದ ಹಾಗೆ ಈ ಬೆಡಗಿ ಇದೀಗ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.ಇದೀಗ ಆಕೆಯ ತಂಗಿ ಕೂಡ ಸ್ಟಾರ್ ಆಗುವ ಎಲ್ಲಾ ಲಕ್ಷಣ ಇದೆ.

ಹೌದು, ಮೊನಾಲಿಸಾಗೆ ಒಬ್ಬ ತಂಗಿಯೂ ಇದ್ದಾಳೆ, ಆಕೆಯೂ ಸಹ ಅಪ್ರತಿಮ ಸುಂದರಿ ಎಂದು ಕೆಲವರು ಫೋಟೋ ಕ್ಲಿಕ್ಕಿಸಿ ಕೊಲ್ಳುತ್ತಿದ್ದಾರೆ. ಮೊನಾಲಿಸಾಳ ಸಹೋದರಿಯ ವಿಡಿಯೋಗಳು ಕೂಡ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹವಾ ಎಬ್ಬಿಸುತ್ತಿವೆ.ಮೊನಾಲಿಸಾ ನಂತರ ಆಕೆಯ ಸಹೋದರಿ ಇಶಿಕಾ ಭೋಸ್ಲೆಯ ಫೋಟೋಗಳು ಮತ್ತು ವಿಡಿಯೋಗಳು ಸಖತ್‌ ವೈರಲ್ ಆಗಲು ಪ್ರಾರಂಭಿಸಿವೆ.ಆಕೆಯ ಸೌಂದರ್ಯ ಮತ್ತು ಕಣ್ಣುಗಳ ಬಗ್ಗೆ ಹೊಗಳುತ್ತಿದ್ದಾರೆ. ಮೊನಾಲಿಸಾಳ ಕಣ್ಣುಗಳಷ್ಟೇ ಈಕೆಯ ಕಣ್ಣುಗಳು ಸಹ ಸುಂದರವಾಗಿದ್ದು, ಅವುಗಳನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದೀಗ ಇಶಿಕಾರ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಆಕೆಯನ್ನು ಗುಣಗಾಣ ಮಾಡುತ್ತಿದ್ದಾರೆ. ಈ ಇಬ್ಬರೂ ಸಹೋದರಿಯರು ಎಷ್ಟು ಸುಂದರವಾಗಿದ್ದಾರೆಂದು ಚರ್ಚೆ ಮಾಡುತ್ತಿದ್ದಾರೆ. 

ಮೊನಾಲಿಸಾಳಂತೆಯೇ ಇಶಿಕಾ!

ಮೊನಾಲಿಸಾ ಮತ್ತು ಇಶಿಕಾ ಇಬ್ಬರದು ಒಂದೇ ರೀತಿಯ ನೋಟವಿದೆ. ಇವರನ್ನ ನೋಡಿ ಜನ ಕೊಂಡಾಡುತ್ತಿದ್ದಾರೆ.ಇಬ್ಬರ ಕಣ್ಣುಗಳು ಒಂದೇ ರೀತಿ ಇದ್ದು, ಮುಖಗಳು ಸಹ ಸಾಕಷ್ಟು ಹೋಲುತ್ತದೆ. ಇಶಿಕಾ ಹೂಮಾಲೆಗಳನ್ನು ಮಾರುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್‌ ಆಗಿದ್ದವು. ಕೆಲವು ವಿಡಿಯೋಗಳಲ್ಲಿ ಆಕೆ ತನ್ನ ಸಹೋದರಿಯೊಂದಿಗೆ ಖುಷಿಯಲ್ಲಿರುವುದನ್ನು ಸಹ ಕಾಣಬಹುದು. ಈ ಅಪ್ರತಿಮ ಸುಂದರಿಯರ ಬಗ್ಗೆ ಜನರು ʼಪ್ರೀತಿʼಯಿಂದ ಕಾಮೆಂಟ್ ಮಾಡುತ್ತಿದ್ದಾರೆ. 

See also  ಮಗಳನ್ನು ಕೊಲ್ಲಲು ಮನಸ್ಸಿಲ್ಲ, ನಾನೇ ಹೋಗ್ತೀನಿ ಎಂದು ಗುಂಡು ಹಾರಿಸಿಕೊಂಡ ತಂದೆ..! ಏನಿದು ಮನಕಲಕುವ ಘಟನೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget