ಕರಾವಳಿಕ್ರೀಡೆ/ಸಿನಿಮಾ

‘ಕಾಶ್ಮೀರ ಫೈಲ್ಸ್‌’, ‘ಕೇರಳ ಸ್ಟೋರಿ’ ಬಳಿಕ ಬರುತ್ತಿದೆ ‘ಕರಾವಳಿ ಸ್ಟೋರಿ’..! ದಕ್ಷಿಣ ಕನ್ನಡದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಕಥೆಯುಳ್ಳ ಸಿನಿಮಾ ಶೀಘ್ರ ತೆರೆಗೆ

ನ್ಯೂಸ್ ನಾಟೌಟ್: ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಕಾಶ್ಮೀರ್ ಫೈಲ್ಸ್‌’ ಹಾಗೂ ‘ಕೇರಳ ಸ್ಟೋರಿ’ ಸಿನಿಮಾದ ಬಳಿಕ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ-ಮುಸ್ಲಿಂ ಸಂಘರ್ಷದ ರಿಯಲ್ ಕಥೆಯುಳ್ಳ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ.


‘ಬೇರ’ ಎಂದು ಸಿನಿಮಾಗೆ ಹೆಸರಿಡಲಾಗಿದೆ. ‘ಬೇರ’ ಎಂದರೆ ತುಳುವಿನಲ್ಲಿ ವ್ಯಾಪಾರ ಅನ್ನುವ ಅರ್ಥ ಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಸಿನಿಮಾದ ಚಿತ್ರೀಕರಣಗೊಂಡಿದೆ. ಈ ಸಿನಿಮಾ ಹಿಂದೂ-ಮುಸ್ಲಿಂ ಸಂಘರ್ಷದ ನೈಜ ಕಥೆಯನ್ನು ಹೊಂದಿದೆ. ‘ಕಾಶ್ಮೀರ್ ಫಲ್ಸ್‌, ‘ಕೇರಳ ಸ್ಟೋರಿ’ ಸಿನಿಮಾಗಳು ನೈಜ ಕಥೆಗಳು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಕರಾವಳಿಯ ಕೋಮು ಸಂಘರ್ಷದ ಕಥೆ ಆಧಾರಿತ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷವಾಗಿದೆ. ಖ್ಯಾತ ಕಿರುತೆರೆ ನಿರ್ದೇಶಕ ವಿನು ಬಳಂಜ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ‘ಮರ್ಚೆಂಟ್ ಆಫ್ ಡೆತ್‌’ ಅನ್ನುವ ಟ್ಯಾಗ್ ಲೈನ್ ಕೂಡ ನೀಡಲಾಗಿದೆ.


ಕರಾವಳಿ ಅಂದ್ರೆ ಕೋಮು ಸೂಕ್ಷ್ಮ ಪ್ರದೇಶ. ಹಿಂದೂ, ಮುಸ್ಲಿಂ ಸಮುದಾಯದ ಅಮಾಯಕ ತರುಣರನ್ನು ತಮ್ಮ ಲಾಭಕ್ಕಾಗಿ ಕೆಲವರು ಯಾವ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಅನ್ನುವುದನ್ನು ಸಿನಿಮಾದಲ್ಲಿ ವಿವರಿಸುವ ಪ್ರಯತ್ನ ನಡೆಸಲಾಗಿದೆ. ಹಿಂದೂ-ಮುಸ್ಲಿಂ ಯುವಕರ ಸಾವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುವ ವ್ಯಕ್ತಿಗಳ ಚಿತ್ರಣವನ್ನು ಹೆಣೆಯಲಾಗಿದೆ. ಅಲ್ಲದೆ ಉಗ್ರವಾದದ ಕರಿನೆರಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ವಿನು ಬಳಂಜ ಅವರು, ‘ಯಾರ ಮನೆಯ ಮಕ್ಕಳೂ ಸಾಯಬಾರದು ಅನ್ನುವ ಎಂಬ ಉದ್ದೇಶದೊಂದಿಗೆ ಸಿನಿಮಾವನ್ನು ಹೆಣೆಯಲಾಗಿದೆ’ ಎಂದು ತಿಳಿಸಿದ್ದಾರೆ.

Related posts

ಎಚ್ಚರಿಕೆ ನಡುವೆಯೂ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣರ ಮತ್ತೊಂದು ಡೀಪ್​ ಫೇಕ್​ ವಿಡಿಯೋ ​..!,ವೈರಲ್ ವಿಡಿಯೋ ವೀಕ್ಷಿಸಿ..

ಬಸ್‌-ಲಾರಿ ಡಿಕ್ಕಿ, ತಂದೆ-ಮಗುವಿಗೆ ಗಂಭೀರ ಗಾಯ

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ದಿನಾಂಕ ವಿಸ್ತರಿಸಿದ್ದೇಕೆ ಸರ್ಕಾರ? ಯಾವತ್ತು ಕೊನೇಯ ದಿನಾಂಕ? ಇಲ್ಲಿದೆ ಸಂಪೂರ್ಣ ಮಾಹಿತಿ