ಕಾಸರಗೋಡುದೇಶ-ಪ್ರಪಂಚ

ಶಾಲಾ ಬಸ್‌ ನಲ್ಲಿ ಸೀಟಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಗಂಭೀರ ಗಾಯಗೊಂಡು ಸಾವನ್ನಪ್ಪಿದ 14 ವರ್ಷದ ಬಾಲಕ

ನ್ಯೂಸ್‌ ನಾಟೌಟ್‌ : ಮಕ್ಕಳು ಶಾಲಾ ಬಸ್‌ ನಲ್ಲಿ ಪ್ರಯಾಣಿಸಿದ್ರೆ ಸೇಫ್ ಅಂತ ಪೋಷಕರು ಯೋಚನೆ ಮಾಡಿ ಶಾಲಾ ಬಸ್‌ ನಲ್ಲಿಯೇ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಮಕ್ಕಳು ಬಸ್‌ ನಲ್ಲಿ ಏನೆಲ್ಲಾ ಮಾಡ್ತಾರೆ ನೋಡಿ.. ಮಕ್ಕಳ ಮಧ್ಯೆ ಸೀಟಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಣ್ಣ ಜಗಳ ದುರಂತ ತಿರುವು ಪಡೆದುಕೊಂಡಿದೆ.

ಈ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದ್ದು, 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. 9 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ಸಿನಲ್ಲಿ ಸೀಟಿನ ಕುರಿತು ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿತು, ಆ ಕ್ಷಣದಲ್ಲಿ ಸರವಣನ್ ಕಂದಗುರುವನ್ನು ತಳ್ಳಿದ ಪರಿಣಾಮ ಆತ ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು ಎಂದು ಹೇಳಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಯಿತಾದರೂ, ಕಂದಗುರು ಸಾವನ್ನಪ್ಪಿದ.

ಘಟನೆಯ ನಂತರ, ಸೇಲಂ ಪೊಲೀಸರು ಸರವಣನ್​ನ್ನು ವಶಕ್ಕೆ ಪಡೆದಿದ್ದಾರೆ, ಮುಂದಿನ ಕಾನೂನು ಕ್ರಮಗಳಿಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದರು.ವಾಗ್ವಾದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Related posts

“ಜೈ ಶ್ರೀರಾಮ್”‌ ಹೇಳದಕ್ಕೆ ಹಲ್ಲೆ ನಡೆಸಿದ ಅಪರಿಚಿತರು! ಗಡ್ಡ ಕತ್ತರಿಸಿ ವಿಕೃತಿ ಮೆರೆದ ಪುಂಡರು!

ಜರ್ಮನಿಯಲ್ಲಿ ದುಬಾರಿ ಸಂಬಳವಿದ್ದರೂ ಐಪಿಎಸ್ ಆದ ಚೆಲುವೆ,ಕಠಿಣ ಪರಿಶ್ರಮದಿಂದ ಸರಕಾರಿ ಉದ್ಯೋಗ ಕೈಹಿಡಿದ ಯುವತಿ

ಭಾರತೀಯ ಸರ್ಕಾರಿ ವೆಬ್‌ಸೈಟ್‌ ಗಳಿಗೆ ಇಂಡೋನೇಷ್ಯಾ ಹ್ಯಾಕರ್ ಗಳ ಬೆದರಿಕೆ! ಗುಪ್ತಚರ ಇಲಾಖೆಯಿಂದ ತುರ್ತು-ಹೈ ಅಲರ್ಟ್!