Latestಕರಾವಳಿಬೆಂಗಳೂರುಶಿಕ್ಷಣ

ಏಪ್ರಿಲ್ 10ರ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಎರಡು ದಿನಗಳ ಬಳಿಕ ಕಂಪ್ಯೂಟರ್‌ ಗೆ ಫಲಿತಾಂಶ ದಾಖಲು ಮಾಡುವ ಪ್ರಕ್ರಿಯೆ ಆರಂಭ

397

ನ್ಯೂಸ್‌ ನಾಟೌಟ್: ಮಾರ್ಚ್‌ ತಿಂಗಳಿನಲ್ಲಿ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆದಿತ್ತು. 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು. ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಲು ತಯಾರಿ ನಡೆಯುತ್ತಿದೆ. ಏಪ್ರಿಲ್ 10ರ ಬಳಿಕ ಫಲಿತಾಂಶ ಘೋಷಣೆಯಾಗಲಿದೆ ಎಂದು ವರದಿ ತಿಳಿಸಿದೆ.

ಮಾರ್ಚ್‌ 1 ರಿಂದ 20ರ ತನಕ ರಾಜ್ಯದ 1,771 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಮುಗಿದ ಬಳಿಕ ರಾಜ್ಯದ 76 ಕೇಂದ್ರಗಳಲ್ಲಿ 25 ಸಾವಿರಕ್ಕೂ ಅಧಿಕ ಮೌಲ್ಯ ಮಾಪಕರು ಉತ್ತರ ಪತ್ರಿಕೆಗಳ ಮೌಲ್ಯ ಮಾಪನವನ್ನು ಪ್ರಾರಂಭಿಸಿದ್ದರು.

ಇನ್ನು ಎರಡು ದಿನದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಕಂಪ್ಯೂಟರ್‌ ಗೆ ಫಲಿತಾಂಶವನ್ನು ದಾಖಲು ಮಾಡುವ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಏಪ್ರಿಲ್ 2ನೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿಮನೆ ಮುಂದೆ ಆಡುತ್ತಿದ್ದ 2 ವರ್ಷದ ಮಗು ಮೇಲೆ ಕಾರು ಹರಿಸಿದ 15ರ ಬಾಲಕ..! ಇಲ್ಲಿದೆ ಮನಕಲಕುವ ವಿಡಿಯೋ

ಆಲೋವೆರಾ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಔಷಧ ಇಟ್ಟಿದ್ದ ಪೋಷಕರು..! 9ನೇ ತರಗತಿ ಬಾಲಕಿ ಸಾವು..!

ಅತ್ತೆ, ಮಗಳು, ನಾದಿನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ..! ಸೆಲ್ಫಿ ವಿಡಿಯೋ ಮಾಡಿ ಆರೋಪಿಯೂ ಆತ್ಮಹತ್ಯೆ..!

See also  ಕೇವಲ 180 ಮೀಟರ್​ ದೂರಕ್ಕೆ ಓಲಾ ಬೈಕ್​ ಬುಕ್​ ಮಾಡಿದ ಯುವತಿ..! ಇದಕ್ಕೆ ಆಕೆ ನೀಡಿದ ಕಾರಣವೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget