Latestಕ್ರೈಂದೇಶ-ವಿದೇಶ

ಮದುವೆಯಾದ ಒಂದೇ ವಾರಕ್ಕೆ ಪತ್ನಿಯನ್ನು ಕೊಂದ ಗಂಡ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

867

ನ್ಯೂಸ್‌ ನಾಟೌಟ್: ಮದುವೆಯಾದ ಒಂದೇ ವಾರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಅಮೌಲಿ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಆರತಿ ಪಾಲ್ (26) ಎಂದು ಗುರುತಿಸಲಾಗಿದೆ. ಈಕೆ ಜೌನ್ ​ಪುರ್​ ಜಿಲ್ಲೆಯ ನಿವಾಸಿಯಾಗಿದ್ದಾಳೆ. ಕೊಲೆಗಾರ ಗಂಡನನ್ನು ರಾಜು ಪಾಲ್ (44) ಎಂದು ಗುರುತಿಸಲಾಗಿದೆ. ಮದುವೆಯಾದ 6 ದಿನಗಳಲ್ಲಿ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಮೃತ ಆರತಿ ಪಾಲ್​, ಆರೋಪಿ ರಾಜು ಪಾಲ್ ​ನ ಮೂರನೇ ಪತ್ನಿ ಎಂದು ಚೌಬೇಪುರ ಎಸ್‌ ಎಚ್‌ ಒ ಜಗದೀಶ್ ಕುಶ್ವಾಹ ಹೇಳಿದ್ದಾರೆ. ಎರಡು ಬಾರಿ ಮದುವೆ ಮುರಿದುಬಿದ್ದ ಬಳಿಕ ಮೇ 9ರಂದು ರಾಜು ಪಾಲ್​, ಆರತಿಯನ್ನು ವಿವಾಹವಾದನು. ಮದುವೆಯಾದ ಕೂಡಲೇ ಇಬ್ಬರ ನಡುವೆ ಜಗಳ ಆರಂಭವಾಯಿತು. ಒಂದು ದಿನ ರಾತ್ರಿ ಆರತಿ, ಆತನೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ವಿಚಾರವನ್ನು ನೆರೆಹೊರೆಯವರು ತಿಳಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ದಿನ ಪತಿಯ ದಾಳಿಯಿಂದ ಗಾಯಗೊಂಡಿದ್ದ ಆರತಿಯನ್ನು ನರಪತ್‌ ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೊಲೀಸರು ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿದ್ದಾಳೆಂದು ದೃಢಪಡಿಸಿದ್ದರು. ಮೃತಳ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿ ಪತಿಯ ವಿರುದ್ಧ ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರು.

ಖ್ಯಾತ ಪ್ರವಾಸಿ ತಾಣ ಚಾರ್‌ ಮಿನಾರ್ ಬಳಿಯ ಗುಲ್ಜಾರ್ ಹೌಸ್‌ ನಲ್ಲಿ ಬೆಂಕಿ..! 17 ಮಂದಿ ಸಜೀವ ದಹನ..!

ಭಾರತದ ಸೇನಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ್ದ ಹರಿಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಅರೆಸ್ಟ್..! ದಾಳಿಗೂ ಮುಂಚೆ ಪಹಲ್ಗಾಮ್ ಗೆ ಬಂದಿದ್ದ ಜ್ಯೋತಿ..!

ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢವಾಗಿ ಸಾವು..! ಪಂಜಾಬ್ ಗೆ ಪ್ರಯಾಣ ಬೆಳೆಸಿದ ಕುಟುಂಬಸ್ಥರು..!

See also  ಹಿಂದೂ -ಮುಸ್ಲಿಂ ಸಂಘರ್ಷದ ಕಥೆಯುಳ್ಳ 'ಬೇರ' ಸಿನಿಮಾದ ಟೀಸರ್ ನೋಡಿ 'ಯಾರಿಗೆ ಯಾರನ್ನು ಕೊಲ್ಲುವ ಹಕ್ಕೂ ಇಲ್ಲ' ಎಂದು ಕಣ್ಣೀರಿಟ್ಟ ಪ್ರವೀಣ್ ನೆಟ್ಟಾರ್ ಪತ್ನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget