ಕರಾವಳಿಸುಳ್ಯ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ,ವ್ಯಾಪಕ ಕಟ್ಟಚ್ಚರ:ಹಂದಿ ಮಾಂಸದ ವಿತರಣೆ ಮತ್ತು ಮಾರಾಟ, ಸಾಗಣೆ 3 ತಿಂಗಳವರೆಗೆ ನಿಷೇಧ

ನ್ಯೂಸ್ ನಾಟೌಟ್ :ಕೇರಳದಲ್ಲಿ ದಿನದಿಂದ ದಿನಕ್ಕೆ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ.ಇದೀಗ  ಕೇರಳದ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ  (African swine fever) ಏಕಾಏಕಿ ವರದಿಯಾಗಿದೆ. ಇದೀಗ ಹಂದಿಗಳನ್ನು ಎರಡು ಫಾರ್ಮ್‌ಗಳಲ್ಲಿ ಕೊಲ್ಲಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಲೆಯಂಪಾಡಿನಲ್ಲಿ ಈ ಜ್ವರ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ದೃಢಪಟ್ಟಿಸಿದ್ದಾರೆ. ನಂತರ, ಜಿಲ್ಲಾಧಿಕಾರಿಗಳು ಹಂದಿಗಳನ್ನು ಮಲೆಯಂಪಾಡಿಯಲ್ಲಿರುವ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಹಂದಿ ಮಾಂಸದ ವಿತರಣೆ ಮತ್ತು ಮಾರಾಟ, ಸಾಗಣೆಯನ್ನು ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಎರಡು ತಿಂಗಳ ಹಿಂದೆ ಹಾನಿಗೊಳಗಾದ ಜಮೀನಿನಿಂದ ಹಂದಿಗಳನ್ನು ಬೇರೆ ಜಮೀನುಗಳಿಗೆ ಸಾಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಲು ತುರ್ತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಕುರಿತಂತೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಲೆಯಂಪಾಡಿ ಹಾಗೂ ಕಣಿಚಾರ್​ ಪ್ರದೇಶಗಳಲ್ಲಿರುವ ಸಾಕಾಣಿಕೆ ಕೇಂದ್ರಗಳಿಂದ ಹಂದಿಗಳನ್ನು ಮಾರಾಟ ಮಾಡಲಾಗಿತ್ತೆ ಎಂಬುದರ ಕುರಿತು ವಿವರವನ್ನು ಪಡೆದುಕೊಳ್ಳಲಾಗುತ್ತಿದೆ. ತುರ್ತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related posts

ಕಡಬ:ಆಸ್ಪತ್ರೆ ಮುಂಭಾಗದಲ್ಲೇ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

ಬಂಟ್ವಾಳ: ಪತ್ನಿಯ ಆತ್ಮಹತ್ಯೆಗೆ ಯುವಕನೊಬ್ಬನ ಕೈವಾಡದ ಶಂಕೆ ! ಪತಿಗೆ ಮೂಡಿದ ಸಂಶಯಕ್ಕೆ ಇಲ್ಲಿದೆ ಕಾರಣ!

ದೆಹಲಿ:ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಟಿ.ಎಂ. ಶಹೀದ್ ತೆಕ್ಕಿಲ್