ದೇಶ-ವಿದೇಶವೈರಲ್ ನ್ಯೂಸ್

ಆಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನು ಜಾರಿ..! ಈ ಬಗ್ಗೆ ತಾಲಿಬಾನ್ ಹೇಳಿದ್ದೇನು..?

250

ನ್ಯೂಸ್ ನಾಟೌಟ್: ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಿಯೋಜನೆ ಅಂತ್ಯಗೊಂಡ ಬಳಿಕ ಆಫ್ಘಾನನಿಸ್ತಾನದ ಆಡಳಿತವನ್ನು ತೆಕ್ಕೆಗೆ ಪಡೆದಿರುವ ತಾಲಿಬಾನ್ ಹಲವು ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಎದುರಿಸುತ್ತಿದೆ. ಅದರಲ್ಲೂ ಹೆಣ್ಣುಮಕ್ಕಳ ಬಹುತೇಕ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಇದೀಗ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಹಿಬಾತುಲ್ಹಾ ಅಖುಂಡಝದಾ ಮಹತ್ವದ ಸೂಚನೆ ನೀಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಸಂಪೂರ್ಣ ಷರಿಯಾ ಕಾನೂನು ಜಾರಿಯಾಗುತ್ತಿದೆ. ಮಹಿಳೆಯರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸುವ, ಬಡಿಗೆಯಿಂದ ಬಡಿದು ಸಾಯಿಸುವ ನಿಯಮವೂ ಜಾರಿಯಾಗುತ್ತಿದೆ. 20 ವರ್ಷ ಹೋರಾಡಿ ಆಡಳಿತ ಪಡೆದಿದ್ದೇವೆ. ಮುಂದಿನ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಹೋರಾಡಿ ಸಂಪೂರ್ಣ ಷರಿಯಾ ಕಾನೂನು ತಂದು ದೇವರ ಆಜ್ಞೆ ಪಾಲಿಸುತ್ತೇವೆ ಎಂದಿದ್ದಾರೆ ಆಫ್ಘಾನಿಸ್ತಾನ ಪ್ರಜಾಪ್ರಭುತ್ವದ ರಾಷ್ಟ್ರವಲ್ಲ. ಈ ರಾಷ್ಚ್ರ ಷರಿಯಾ ಕಾನೂನು ಮೂಲಕ ಮುಂದೆ ಸಾಗಲಿದೆ. ನಾವು ದೇವರ ಪ್ರತಿನಿಧಿಗಳು. ದೇವರ ಆಜ್ಞೆಯನ್ನು ಪಾಲಿಸುವುದು ನಮ್ಮ ಕ

ರ್ತವ್ಯ. ಅಂತಾರಾಷ್ಟ್ರೀಯ ಕಾನೂನು ಏನೇ ಇರಬಹುದು, ಆದರೆ ಷರಿಯಾ ಏನು ಹೇಳುತ್ತದೆ ಅನ್ನೋದರ ಮೇಲೆ ನಮ್ಮ ಆಡಳಿತ. ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳ ಕುರಿತು ಬೊಗಳೆ ನಮಗೆ ಬೇಕಿಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಸೂಚಿಸಿದ್ದಾರೆ. ಸುದೀರ್ಘ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ತಾಲಿಬಾನ್ ಮುಖ್ಯಸ್ಥ ಇದೀಗ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ. ಆಫ್ಘಾನಿಸ್ತಾನದ ಷರಿಯಾ ಕಾನೂನನು ಮೂಲಕ ಆಡಳಿತ ನಡೆಯಲಿದೆ. ಇದು ಈ ನೆಲದ ಕಾನೂನು. ಬಾಹ್ಯ ಶಕ್ತಿಗಳು, ಬಾಹ್ಯ ಕಾನೂನುಗಳಿಗೆ ಅವಕಾಶವಿಲ್ಲ. ಬಾಹ್ಯ ಶಕ್ತಿಗಳು ಮೂಗು ತೂರಿಸುವ ಅವಶ್ಯಕತೆಯೂ ಇಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಎಚ್ಚರಿಸಿದ್ದಾರೆ.

See also  ಆರ್.ಎಸ್.ಎಸ್ ವಿರೋಧಿಸುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಗೆ ಆರ್.ಎಸ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ! ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೂ ನಾನು ಹೋಗೋದಿಲ್ಲ ಎಂದದ್ದೇಕೆ ನಿರ್ದೇಶಕ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget