Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ..! ನಡುಗಿದ ದೆಹಲಿ..!

557

ನ್ಯೂಸ್ ನಾಟೌಟ್: ಅಫ್ಘಾನಿಸ್ತಾನದಲ್ಲಿ ಇಂದು(ಎ.16) ನಸುಕಿನಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.6ರಷ್ಟಿತ್ತು ಎನ್ನಲಾಗಿದೆ.

ಭೂಕಂಪ 121 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯೂರೋಪಿಯನ್-ಮೆಡಿಟರೇನಿಯನ್ ಭೂಕಂಪ ಕೇಂದ್ರ (ಇಎಂಎಸ್‍ಸಿ) ಹೇಳಿದೆ. ಇದರ ಕೇಂದ್ರ ಬಿಂದು 1.08 ಲಕ್ಷ ಜನಸಂಖ್ಯೆ ಹೊಂದಿದ ಬಘ್ಲಾನ್ ನಗರದಿಂದ 164 ಕಿಲೋಮೀಟರ್ ಪೂರ್ವಕ್ಕೆ ಇತ್ತು ಎಂದು ಸ್ಪಷ್ಟಪಡಿಸಿದೆ. ಮೊದಲು ಇದನ್ನು 6.4 ತೀವ್ರತೆಯ ಭೂಕಂಪ ಎಂದು ಪ್ರಕಟಿಸಲಾಗಿತ್ತು. ಆ ಬಳಿಕ ಪರಿಷ್ಕರಿಸಿ 5.6 ಎಂದು ಹೇಳಲಾಗಿದೆ.

ಅದೇ ವೇಳೆಗೆ ದೆಹಲಿ-ಎನ್‍ ಸಿಆರ್ ಪ್ರದೇಶದಲ್ಲೂ ಲಘು ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಏಷ್ಯಾ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪಗಳಿಗೆ ಇದು ಇತ್ತೀಚಿನ ಸೇರ್ಪಡೆಯಾಗಿದೆ.

 

See also  ಉಪ್ಪಿನಂಗಡಿ: ಪಿಕಪ್ ನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ..! ಹಸು, ಹೋರಿ ಹಾಗೂ ಕರು ಪೊಲೀಸರ ವಶಕ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget