ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮುಂಭಾಗದ ಅಡ್ಕಾರ್ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ 2025-26ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಾರಂಭಗೊಂಡಿದೆ.
ಪ್ರಾಥಮಿಕವಾಗಿ 2 ರಿಂದ 6 ವರ್ಷದ ಮಕ್ಕಳಿಗಾಗಿ ಈ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಆರಂಭದಲ್ಲಿ ಕೇವಲ 2 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಇದೀಗ 75 ಮಕ್ಕಳು ದಾಖಲಾತಿಗೊಂಡು ಮುನ್ನಡೆಯುತ್ತಿದೆ. ಎಲ್ಲಾ ಪಠ್ಯಾನುಕ್ರಮಕ್ಕೆ ಅನುಗುಣವಾಗಿ ಎಲ್.ಕೆ.ಜಿ ಯಿಂದ ಯು.ಕೆ.ಜಿ ಯವರೆಗೆ ಬೋಧಿಸಲಾಗುವುದು. ಪೋಷಕರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ದಾಖಲಿಸಬಹುದಾಗಿದೆ. ತಮ್ಮ ಮಕ್ಕಳಿಗೆ ಯು.ಕೆ.ಜಿ ಯವರೆಗೆ ಸಂಸ್ಥೆಯಲ್ಲಿ ಕಲಿಯುವ ಅವಕಾಶವಿದ್ದು, ವೈಜ್ಞಾನಿಕ ಆಧಾರಿತವಾದ ಶಿಕ್ಷಣ ಪದ್ಧತಿ ಹೊಂದಿರುವ ಮೊಂಟೆಸ್ಸರಿ ಪದ್ಧತಿಯ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತಿದೆ. ಸಂಸ್ಥೆಯ ವಿಶೇಷತೆಯೆಂದರೆ ಚಟುವಟಿಕೆಯಾದಾರಿತವಾದ ಪಠ್ಯಕ್ರಮವಿದ್ದು, ಪ್ರತಿ ಹಬ್ಬಗಳಿಗೂ ವಿಶೇಷ ಆದ್ಯತೆ ನೀಡಿ ಆಚರಿಸುವುದರ ಮುಖಾಂತರ ಹಬ್ಬಗಳ ಪ್ರಾಮುಖ್ಯತೆಯನ್ನು ಪುಟಾಣಿಗಳಿಗೆ ಪರಿಚಯಿಸಲಾಗುತ್ತದೆ.
ಸುಸಜ್ಜಿತವಾದ ಕೊಠಡಿ, ಆಟದ ಮೈದಾನ. ಆಟಿಕೆಗಳನ್ನು ಹೊಂದಿದೆ. ಪೇರೆಂಟ್ಸ್ ಓರಿಯೆಂಟೇಷನ್ ಕಾರ್ಯಕ್ರಮದ ಮುಖಾಂತರ ಮೊಂಟೆಸ್ಸರಿ ಶಿಕ್ಷಣ ಪದ್ಧತಿ ಹಾಗೂ ಮಕ್ಕಳಿಗೆ ಇದರಿಂದಾಗುವ ಉಪಯೋಗವನ್ನು ವಿವರಿಸಲಾಗುವುದು. ತಮ್ಮ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದುವ ಬಯಕೆಯಿದ್ದರೆ ತಡ ಮಾಡದೆ ಇಂದೇ ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಗೆ ದಾಖಲಿಸಿ. ಹೆಚ್ಚಿನ ಮಾಹಿತಿಗಾಗಿ 9591762980, 9740043041 Email: amschool99gmail. Com ಸಂಪರ್ಕಿಸಿ