ಕರಾವಳಿ

ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣ: ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದಲ್ಲೇ ಕೂಲಿ ಕಾರ್ಮಿಕನ ಅಂತ್ಯಕ್ರಿಯೆ, ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪತ್ನಿ..!

254

ನ್ಯೂಸ್ ನಾಟೌಟ್: ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣದಲ್ಲಿ ಸಾವಿಗೀಡಾಗಿದ್ದ ಕೂಲಿ ಕಾರ್ಮಿಕನ ಮೃತದೇಹವನ್ನು ಸುಳ್ಯದಲ್ಲಿಯೇ ಅಂತಿಮ ಸಂಸ್ಕಾರ ನಡೆಸಲಾಯಿತು.

ಮಂಗಳವಾರ ರಾತ್ರಿ 37 ವರ್ಷದ ಅಣ್ಣಪ್ಪ ಅನ್ನುವ ವ್ಯಕ್ತಿ ಊಟ ಮುಗಿಸಿಕೊಂಡು ವಾಪಸ್ ತಾನಿದ್ದ ಜಾಗಕ್ಕೆ ತೆರಳುತ್ತಿದ್ದರು. ನಡೆದುಕೊಂಡು ಹೋಗುತ್ತಿದ್ದ ಅವರಿಗೆ ಸ್ಕಾರ್ಫಿಯೋ ಕಾರೊಂದು ರಭಸದಿಂದ ಬಂದು ಗುದ್ದಿತ್ತು. ಡಿಕ್ಕಿಯ ರಭಸಕ್ಕೆ ಅಣ್ಣಪ್ಪ ಸ್ಥಳದಲ್ಲೇ ಧಾರವಾಡದ ಹೊನ್ನೇನಹಳ್ಳಿ ಮೂಲದ ಕಾರ್ಮಿಕ ಸಾವಿಗೀಡಾಗಿದ್ದರು. ಮೃತದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಲಾಗಿತ್ತು.

ಮೃತ ಕಾರ್ಮಿಕನ ಕುಟುಂಬಸ್ಥರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದ ರುದ್ರಭೂಮಿಯಲ್ಲಿ ಕೂಲಿ ಕಾರ್ಮಿಕನ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಪತ್ನಿ ರೂಪ ಪಾಲ್ಗೊಂಡಿದ್ದರು. ಕೇವಲ ೪ ತಿಂಗಳ ಹಿಂದೆ ಅಣ್ಣಪ್ಪ ಸುಳ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದರು. ಆದರೆ ದುರಾದೃಷ್ಟವಶಾತ್ ಇವರ ಬದುಕಿನಲ್ಲಿ ವಿಧಿಯಾಟ ಆಡಿತ್ತು. ಶವ ಸಂಸ್ಕಾರಕ್ಕೆ ಪ್ರಗತಿ ಆಂಬುಲೆನ್ಸ್ ಅಚ್ಚು, ಪ್ರಕಾಶ್ ಪೊಲೀಸ್ ಸುಳ್ಯ, ಗುರುವ ಸಹಕರಿಸಿದರು.

See also  ಆತ್ಮಹತ್ಯೆಗೆಂದು ಕುಮಾರಧಾರ ನದಿಗೆ ಹಾರಿದ ವ್ಯಕ್ತಿ ಪೊದೆಯಲ್ಲಿ ಸಿಕ್ಕಿಹಾಕಿಕೊಂಡ..? ಮುಂದೆ ನಡೆದಿದ್ದೇನು..? ಇಲ್ಲಿದೆ ಸಂಪೂರ್ಣ ಡಿಟೇಲ್ಸ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget