ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅಡ್ಕಾರು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗ ರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಫೆ. 26 ರಿಂದ 28ರವರೆಗೆ ನಡೆಯುವ ಕಾಲಾವಧಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ (ಫೆ.19) ಗೊನೆ ಮುಹೂರ್ತ ನೆರವೇರಿತು.
ಬ್ರಹ್ಮಶ್ರೀ ವೇದಮೂರ್ತಿ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗ ರಾಜ ಸೇವಾ ಟ್ರಸ್ಟ್ (ರಿ ) ಇದರ ಅಧ್ಯಕ್ಷ ಶಿವರಾಮ ರೈ, ಉಪಾಧ್ಯಕ್ಷ ನಾಗೇಶ್ ಅಡ್ಕಾರು, ಖಾಜಾಂಚಿ ಜಯಂತ ಗೌಡ ಮತ್ತು ಟ್ರಸ್ಟ್ ಸದಸ್ಯರಾದ ಕೃಷ್ಣ ಕುಮಾರ್ ಅಡ್ಕಾರು, ನಾರಾಯಣ ಕಜಗದ್ದೆ ಮತ್ತು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗ ರಾಜ ಸೇವಾ ಸಮಿತಿಯ ಉಪಾಧ್ಯಕ್ಷ ಎ.ಕೆ. ಸೀತಾರಾಮ ಗೌಡ ಅಲಂಕಳ್ಯ ಮತ್ತಿತರರು ಉಪಸ್ಥಿತರಿದ್ದರು.