ಕರಾವಳಿ

ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳನ್ನು ಭೇಟಿಯಾದ ಸೌಜನ್ಯ ಕುಟುಂಬ, ಸೌಜನ್ಯ ನ್ಯಾಯಕ್ಕಾಗಿ ಸ್ವಾಮೀಜಿ ಕೊಟ್ಟ ಭರವಸೆ ಏನು?

223

ನ್ಯೂಸ್ ನಾಟೌಟ್: ಸೌಜನ್ಯ ಕುಟುಂಬ ಹಾಗೂ ಹಿಂದೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಒಕ್ಕಲಿಗ ಸಮುದಾಯದ ಪ್ರಬಲ ಮಹಾಸ್ವಾಮೀಜಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳನ್ನು ಮಂಡ್ಯದಲ್ಲಿ ಭೇಟಿಯಾಗಿದ್ದಾರೆ.

ಸದ್ಯ ಸೌಜನ್ಯ ಪ್ರಕರಣದ ಮರು ತನಿಖೆಗೆ ಎಲ್ಲ ಕಡೆಯಿಂದ ಭಾರಿ ಒತ್ತಾಯಗಳು ಕೇಳಿ ಬರುತ್ತಿದೆ. ಪ್ರತಿಭಟನೆಗಳು ಕೂಡ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯವನ್ನು ಒದಗಿಸಬೇಕು ಎಂದು ಸೌಜನ್ಯ ತಾಯಿ ಸ್ವಾಮೀಜಿಗಳ ಎದುರು ಕಣ್ಣೀರು ಸುರಿಸಿಕೊಂಡು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಾಸ್ವಾಮೀಜಿಗಳು ಕುಟುಂಬಕ್ಕೆ ಸಾಂತ್ವಾನವನ್ನು ಹೇಳಿದರು. ಮಾತ್ರವಲ್ಲ ಹೋರಾಟಕ್ಕೆ ಸಂಬಂಧಪಟ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು ಎನ್ನಲಾಗಿದೆ.

ಇದೇ ವೇಳೆ ಸ್ವಾಮೀಜಿಗಳು ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆ ನಡೆಸುವುದಕ್ಕಾಗಿ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

See also  ಇಂದಿನಿಂದ(ಆ.1) ಎಲ್.​ಪಿ.ಜಿ ಸಿಲಿಂಡರ್ ಬೆಲೆ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget