ಕರಾವಳಿಸುಳ್ಯ

ಆಧುನಿಕ ಸುಳ್ಯದ ಭವ್ಯ ಶಿಲ್ಪಿ,ಎ.ಒ.ಎಲ್.ಇ. ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡರ ೯೪ನೇ ಜನ್ಮ ದಿನಾಚರಣೆ

484

ನ್ಯೂಸ್ ನಾಟೌಟ್ : ಸುಳ್ಯದ ಅಮರ ಶಿಲ್ಪಿ ,ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟ್ರಮಣ ಗೌಡರ ೯೪ ನೇ ಜನ್ಮದಿನಾಚರಣೆ ಅಂಗವಾಗಿ ಕೆ.ವಿ.ಜಿ ಸರ್ಕಲ್ ನಲ್ಲಿರುವ ಪುತ್ಥಳಿಗೆ ಹಾರಾರ್ಪಣೆಯು ನಡೆಯಿತು.

ಸಮಾಜಮುಖಿ ಕೆಲಸಗಳು ಜೀವಂತ :

ಈ ಸಂದರ್ಭ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ .ಕೆ.ವಿ. ಚಿದಾನಂದ , ಉಪಾಧ್ಯಕ್ಷೆ ಶೋಭಾ ಚಿದಾನಂದ,ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.,ನುಡಿನಮನಗಳನ್ನು ಸಲ್ಲಿಸಿ ಪುತ್ಥಳಿಗೆ ಹಾರಾರ್ಪಣೆ ಮಾಡಿದರು. ಕೆ.ವಿ.ಚಿದಾನಂದ ಅವರು ಮಾತನಾಡಿ “ಸುಳ್ಯದ ಅಮರ ಶಿಲ್ಪಿ , ಹಿರಿಯ ವ್ಯಕ್ತಿ. ಅನೇಕ ಮಕ್ಕಳಿಗೆ ಶಿಕ್ಷಣ ಸಂಸ್ಥೆ ,ರೋಗಿಗಳ ಆರೈಕೆ ಮತ್ತು ಚಿಕಿತ್ಸೆಗೆ ಆಸ್ಪತ್ರೆ ಮೊದಲಾದ ಪುಣ್ಯ ಕಾರ್ಯವನ್ನು ಮಾಡಿ ಇತಿಹಾಸ ಸೃಷ್ಟಿಸಿದವರು.ಅವರ ನಡೆ- ನುಡಿ , ಸಾಧನೆ, ಆದರ್ಶಗಳು ನಮಗೆ ದಾರಿದೀಪವಾಗಿವೆ. ಇಂದು ಅವರು ನಮ್ಮೊಂದಿಗಿಲ್ಲವಾದರೂ ಅವರ ಸಮಾಜಮುಖಿ ಕೆಲಸಗಳು ಇಂದಿಗೂ ಜೀವಂತವಾಗಿದೆ.ಪ್ರತಿ ವರ್ಷವೂ ಅವರ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.ಈ ಪ್ರಯುಕ್ತ ೨ ದಿನಗಳ ಕಾಲ ಕೆ. ವಿ. ಜಿ. ಸುಳ್ಯ ಹಬ್ಬವನ್ನು ಕೂಡಾ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ವಿ.ಹೇಮನಾಥ್,ಜಗದೀಶ್ ಅಡ್ತಲೆ,ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಜ್ಞಾನೇಶ್ ಎನ್.ಎ.,ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ,ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು,ಆಡಳಿತಾಧಿಕಾರಿಗಳು,ಸಿಬ್ಬಂದಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಹಾಗೂ ಸ್ಥಾಪಕರ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ|ಲೀಲಾಧರ್ ಡಿ.ವಿ. ಸ್ವಾಗತಿಸಿದರು.ಎನ್.ಎಮ್.ಸಿ.ಪ್ರಾಂಶುಪಾಲ ರುದ್ರಕುಮಾರ್ ವಂದಿಸಿದರು.

See also  ಉಳ್ಳಾಲ ನೈತಿಕ ಪೊಲೀಸ್‌ಗಿರಿ ಪ್ರಕರಣ; ಹಿಂದೂ ಸಂಘಟನೆಯ ಐವರು ಅರೆಸ್ಟ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget