ಕೊಡಗು

ಕೊಯನಾಡು: ಗಿಡ ನೆಟ್ಟಿದ್ದಲ್ಲದೆ ಆರೈಕೆಯನ್ನೂ ಮಾಡುತ್ತಿರುವ ಆದರ್ಶ ಫ್ರೆಂಡ್ಸ್ , ಪರಿಸರ ಕಾಳಜಿಗೊಂದು ಬಿಗ್ ಸೆಲ್ಯೂಟ್

ನ್ಯೂಸ್ ನಾಟೌಟ್: ಇತ್ತೀಚಿಗೆ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದ ಕೊಯನಾಡಿನ ಆದರ್ಶ ಫ್ರೆಂಡ್ಸ್ ಕ್ಲಬ್ ಚೆಡಾವು ಇದೀಗ ನೆಟ್ಟಂತಹ ಗಿಡಗಳ ಆರೈಕೆಯನ್ನೂ ಮಾಡಿ ಸುದ್ದಿಯಾಗಿದೆ.

ಸಾಮಾನ್ಯವಾಗಿ ಕೆಲವರು ಕಣ್ಣುಕಟ್ಟಿಗೆ ನಾಲ್ಕು ಗಿಡಗಳನ್ನು ನೆಟ್ಟು ಬಳಿಕ ಆ ಕಡೆ ಸುಳಿಯುವುದೇ ಇಲ್ಲ. ಆದರೆ ಆದರ್ಶ ಫ್ರೆಂಡ್ಸ್ ಕತ್ತಿ, ಹಾರೆ ಹಿಡಿದುಕೊಂಡು ಬೀದಿಗೆ ಇಳಿದು ನೆಟ್ಟ ಗಿಡಗಳ ಆರೈಕೆಯನ್ನು ಮಾಡಿದೆ. ಆದರ್ಶ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸುನಿಲ್ ಪನಿಯಾಲ, ಆದರ್ಶ ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷ ಉದಯ್ ಕುಮಾರ್ ಹನಿಯಡ್ಕ, ಸದಸ್ಯ ಲೀಲಾಧರ ನೂಜೆಲು, ಸಂಪ್ರಿತ್ ನಿಡಿಂಜಿ, ಗೌತಮ್ ಕುತ್ತಿಮುಂಡ, ತನುಷ್ ಚೆಡಾವು, ಪ್ರಶಾಂತ್ ಚೆಡಾವು, ಉಮೇಶ್ ಹನಿಯಡ್ಕ, ಭರತ್ ಚೆಡಾವು ಮತ್ತಿತರ ಯುವಕರ ತಂಡ ಹಾಜರಿದ್ದರು.

Related posts

ಮಡಿಕೇರಿ:ಜಾಗದ ವಿಷಯದಲ್ಲಿ ತಕರಾರು, ವಕೀಲ-ಮಹಿಳೆ ಮಧ್ಯೆ ಬೀದಿ ರಂಪಾಟ

ಅರಂತೋಡು: ಬೊಲೆರೊ -ಪಿಕಪ್ ವಾಹನಗಳ ನಡುವೆ ಅಪಘಾತ, ಸವಾರರಿಗೆ ಗಾಯ

ಮಡಿಕೇರಿ:ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿಂದ ರಾಗಿ ಮಾಲ್ಟ್,ವಾರಕ್ಕೆರಡು ಮೊಟ್ಟೆ ವಿತರಣೆ; ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? ಇಲ್ಲಿದೆ ವರದಿ