ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಗೆಳತಿಯ ಮನೆಯಿಂದಲೇ ಚಿನ್ನ ಕದ್ದ ಈ ನಟಿ ಯಾರು..? ವಿಚಾರಣೆ ವೇಳೆ ಬಯಲಾಯ್ತು ರಹಸ್ಯ..!

ನ್ಯೂಸ್ ನಾಟೌಟ್: ಸ್ನೇಹಿತೆಯ ಮನೆಯಿಂದಲೇ ಚಿನ್ನ ಕದ್ದ ಹಿನ್ನೆಲೆಯಲ್ಲಿ ಸಿನಿಮಾ ನಟಿಯೊಬ್ಬಳನ್ನು ಆಂಧ್ರ ಪ್ರದೇಶದ ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ನಟಿ ಸೌಮ್ಯಾ ಶೆಟ್ಟಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಭಾರತೀಯ ಅಂಚೆ ಇಲಾಖೆಯ ನಿವೃತ್ತ ನೌಕರ ಪ್ರಸಾದ್ ಬಾಬು ಎಂಬುವರ ಮನೆಯಲ್ಲಿ ಸೌಮ್ಯಾ ಶೆಟ್ಟಿ ಚಿನ್ನ ಕದ್ದಿದ್ದಾಳೆಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಬಳಿಯಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನಟಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ತೆಲುಗಿನ ‘ಯುವರ್ಸ್ ಲವಿಂಗ್ಲಿ’, ‘ದಿ ಟ್ರಿಪ್’ ಸಿನಿಮಾಗಳಲ್ಲಿ ನಟಿಸಿರುವ ಸೌಮ್ಯಾ ಶೆಟ್ಟಿ ಕೆಲವು ಕಿರು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಪ್ರಸ್ತುತ ‘ಶಿವಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ.

ಸೌಮ್ಯಾ ಶೆಟ್ಟಿ ಮತ್ತು ಪ್ರಸಾದ್ ಬಾಬು ಮಗಳು ಮೌನಿಕಾ ಇಬ್ಬರೂ ಗೆಳತಿಯರು. ಚಲನಚಿತ್ರ ಆಡಿಷನ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸೌಮ್ಯಾ ಆಗಾಗ ಮೌನಿಕಾಳ ಭೇಟಿಗೆ ಮನೆಗೆ ಆಗಮಿಸುತ್ತಿದ್ದಳು. ಈ ಸಲುಗೆಯಿಂದ ಆಕೆ ಪ್ರಸಾದ್ ಬಾಬು ಅವರ ಕುಟುಂಬದ ಆದಾಯದ ಮೂಲ, ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದುಕೊಂಡಿದ್ದಳು ಎನ್ನಲಾಗಿದೆ. ಮಗಳ ಗೆಳತಿ ಎನ್ನುವ ಕಾರಣಕ್ಕೆ ಪ್ರಸಾದ್‌ ಬಾಬು ಅವರ ಕುಟುಂಬವೂ ಸೌಮ್ಯಾ ಶೆಟ್ಟಿ ಮೇಲೆ ವಿಶ್ವಾಸವಿರಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಇತ್ತೀಚೆಗೆ ಮನೆಯಿಂದ ಸುಮಾರು 1 ಕೆಜಿ ಚಿನ್ನ ಕದ್ದಿದ್ದಳು.

ಪ್ರಸಾದ್‌ ಬಾಬು ಕುಟುಂಬ ಮದುವೆಗೆಂದು ಹೊರ ಹೋಗಿದ್ದಾಗ ಈ ಕೃತ್ಯ ಎಸಗಿ ಗೋವಾಕ್ಕೆ ಪರಾರಿಯಾಗಿದ್ದಳು ಎನ್ನಲಾಗಿದೆ. ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಬಂದಿತ್ತು. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚು ತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಜನರನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಈ ಆರೋಪಿಗಳ ಪಟ್ಟಿಯಲ್ಲಿ ಸೌಮ್ಯಾ ಶೆಟ್ಟಿ ಸಹ ಇದ್ದರು ಎನ್ನಲಾಗಿದೆ. ತನಿಖೆ ವೇಳೆ ಸೌಮ್ಯಾ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯಿಂದ 74 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಕ್ರಿಯಳಾಗಿರುವ ಸೌಮ್ಯಾ ಶೆಟ್ಟಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾಳೆ.

Related posts

ವೃದ್ಧನ ಮನೆಗೆ ನುಗ್ಗಿದ ಕಳ್ಳರು..! ಕಳ್ಳತನಕ್ಕೆ ಬಂದವರು ತಾವೇ 500 ರೂ. ಇಟ್ಟು ಹೋದದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಳ್ಳರ ಕಹಾನಿ

ಅಪ್ರಾಪ್ತನಿಂದ ಮರ್ಸಿಡಿಸ್ ಕಾರ್ ಹಿಟ್ ಆಂಡ್ ರನ್ ಕೇಸ್ ನಲ್ಲಿ1.98 ಕೋಟಿ ರೂ. ಪರಿಹಾರಕ್ಕೆ ಕೋರ್ಟ್ ಆದೇಶ ..! ಇಲ್ಲಿದೆ ವೈರಲ್ ವಿಡಿಯೋ

ಮಂಗಳೂರು: ಹಾರುತ್ತಿರುವ ವಿಮಾನದಿಂದ ಸಮುದ್ರಕ್ಕೆ ಜಿಗಿಯುತ್ತೇನೆಂದು ಪ್ರಯಾಣಿಕನ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಏರ್ ಇಂಡಿಯಾ ಸಂಸ್ಥೆ