ಬೆಂಗಳೂರು: ನಟಿ ಸಾನ್ವಿ ಶ್ರೀ ವಾತ್ಸವ್ ಕನ್ನಡದ ಹೆಸರಾಂತ ನಟಿ. ಹುಟ್ಟಿದ್ದು ಆಂದ್ರ ಪ್ರದೇಶದಲ್ಲಾದರೂ ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದೇ ಹೆಚ್ಚು.ಇದೀಗ ಇದೇ ಮೊದಲ ಬಾರಿಗೆ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿ ಕೊಳ್ಳುವ ಉತ್ಸಾಹದಲ್ಲಿ ಪಾಲ್ಗೊಂಡು ಶೂಟಿಂಗ್ ಮಾಡುತ್ತಿರುವಾಗಲೇ ಆಯತಪ್ಪಿ ಬಿದ್ದಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಈ ದುರಂತ ಸಂಭವಿಸಿದ್ದು, ಯಾವುದೇ ಅನಾಹುತವಾಗಿಲ್ಲ.ಮುಖ್ಯವಾಗಿ ಈ ಚಿತ್ರದಲ್ಲಿ ಇವರಿಗೆ ಗ್ಯಾಂಗ್ ಸ್ಟರ್ ಪಾತ್ರ. ಸಾಹಸ ಸನ್ನಿವೇಶಗಳು ಇರುವುದರಿಂದ ಸಾನ್ವಿಯವರು ಚಿತ್ರೀಕರಣ ಮುಂಚಿತವಾಗಿ ತರಬೇತಿ ಪಡೆದು ಕೊಳ್ಳುತ್ತಿದ್ದರು. ಸಿನಿಮಾದಲ್ಲಿ ಮಳೆ ಬರುವ ವೇಳೆ ಫೈಟಿಂಗ್ ಸೀನೊಂದಿದೆ. ಈ ವೇಳೆ ಅಭ್ಯಾಸದಲ್ಲಿ ನಿರತರಾದ ಸಾನ್ವಿಯವರು ಕಾಲು ಜಾರಿ ಬಿದ್ದಿದ್ದಾರೆ.ಈ ವೇಳೆ ಅವರ ಕೈಗೆ , ಕಾಲಿಗೆ ಪೆಟ್ಟು ಬಿದ್ದಿದೆ. ಕೂಡಲೇ ಚಿಕಿತ್ಸೆಯನ್ನು ನೀಡಲಾಗಿದೆ. ಸದ್ಯ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಸಾನ್ವಿಯವರು ಸಂಪೂರ್ಣ ಚೇತರಿಸಿಕೊಂಡ ಬಳಿಕ ಚಿತ್ರೀಕರಣ ಆರಂಭವಾಗಲಿದೆ.