ಕರಾವಳಿದೇಶ-ಪ್ರಪಂಚ

ಉಡುಪಿ:ತೆಲುಗಿನ ಖ್ಯಾತ ನಟಿ,ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಕೃಷ್ಣ ಮಠಕ್ಕೆ ಭೇಟಿ..!ಕರಾವಳಿಗೆ ಭೇಟಿ ನೀಡಿದ ಉದ್ದೇಶವೇನು?

ನ್ಯೂಸ್ ನಾಟೌಟ್ : ಸರಳತೆಯಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದ ಸಿಂಪಲ್ ಬ್ಯೂಟಿ ಹಾಗೂ ತೆಲುಗು,ತಮಿಳಿನ ಖ್ಯಾತ ನಟಿ ಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ.ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಚಿತ್ರನಟಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಪಡೆದ ಅವರು ಕೆಲವೊಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ನಂತರ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.ಈ ವೇಳೆ ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

ರಾಕಿಂಗ್​ ಸ್ಟಾರ್​’ ಯಶ್​  ಅವರು ಟಾಕ್ಸಿಕ್’ ಸಿನಿಮಾ ಅನೌನ್ಸ್​ ಮಾಡಿದ ಬಳಿಕ ಹಲವು ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ‘ಟಾಕ್ಸಿಕ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಟೈಟಲ್​ ಅನಾವರಣ ಮಾಡುವ ಸಲುವಾಗಿ ಬಿಡುಗಡೆ ಮಾಡಿದ ಟೀಸರ್​ ಗಮನ ಸೆಳೆದಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್​ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Related posts

ಸುಳ್ಯ: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ,ಕಳ್ಳ ಬಟ್ಟಿ ಸಾರಾಯಿ,ಪರಿಕರಗಳು ವಶಕ್ಕೆ

ಡಾಕ್ -೧ ಕೆಮ್ಮಿನ  ಔಷಧಿ ಸೇವಿಸಿ 18 ಮಕ್ಕಳು ದಾರುಣ ಸಾವು

ಸುಳ್ಯ: ನ.26ರಂದು ಮಡಪ್ಪಾಡಿಯಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ, ಕೆ.ವಿ.ಜಿ. ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ, ಸಲಹೆ