ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್

ಮೋಹಕ ತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ರಿಲೀಸ್ ಯಾವಾಗ? ರಾಜ್‌ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನದ ಚಿತ್ರ ಕೊನೆಗೂ ತೆರೆಗೆ

205

ನ್ಯೂಸ್ ನಾಟೌಟ್ : ಮೋಹಕ ತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿ ಒಂದು ವರ್ಷ ಸಮೀಪಿಸುತ್ತಿದೆ. ನವೆಂಬರ್ 14, 2022ರಂದೇ ತಮ್ಮ ಚೊಚ್ಚಲ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾ ಶೂಟಿಂಗ್ ಮುಗಿಸಿರುವುದಾಗಿ ರಮ್ಯಾ ಸಂಸ್ಥೆಯು ಹೇಳಿಕೊಂಡಿತ್ತು.

ಆನಂತರ ಸಿನಿಮಾ ಯಾವಾಗ ರಿಲೀಸ್ (Release) ಎನ್ನುವ ಕುರಿತು ಮಾಹಿತಿ ನೀಡಿರಲಿಲ್ಲ. ಇದೀಗ ಸಿನಿಮಾ ರಿಲೀಸ್ ಮಾಡಲು ರಮ್ಯಾ ಡೇಟ್ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

2022 ನವೆಂಬರ್ ನಲ್ಲಿ ಶೂಟಿಂಗ್ ಮುಗಿಸಲಾಗಿತ್ತು. 2023 ನವೆಂಬರ್ 24 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರಮ್ಯಾ ನಿರ್ಮಾಣದ ಸಿನಿಮಾ ಬಗ್ಗೆ ಸಾಕಷ್ಟು ಅಭಿಮಾನಿಗಳಿಗೆ ನಿರೀಕ್ಷೆ ಇತ್ತು ಎನ್ನಲಾಗಿದೆ.

ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್‌ ಬಿ ಶೆಟ್ಟಿ (Raj B Shetty) ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್‌ (Siri Ravikumar) ಮತ್ತು ರಾಜ್‌ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ನಿರ್ದೇಶನದ ಜೊತೆಗೆ ನಟಿಸಿರುವ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನೇ ನಿರ್ವಹಣೆ ಮಾಡಿದ್ದಾರೆ ಎನ್ನಲಾಗಿದೆ.

See also  ಕೋಮು ಭಾವನೆ ಕೆರಳಿಸಿದ್ರೆ ಹುಷಾರ್: ಕಮೀಷನರ್ ವಾರ್ನಿಂಗ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget