ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಅರೆ..! ನಟಿ ರಮ್ಯಾ ಹಾಕ್ಕೊಂಡಿದ್ದು ಶರ್ಟ್‌ ಮಾತ್ರ..! ಪ್ಯಾಂಟ್, ಶಾರ್ಟ್ಸ್‌ ಹಾಕದೆ ನಟಿ ಅರೆಬೆತ್ತಲೆಯಾಗಿದ್ದು ಏಕೆ?

211

ನ್ಯೂಸ್ ನಾಟೌಟ್: ಒಂದು ಕಾಲದ ಕನ್ನಡ ಜನಪ್ರಿಯ ನಟಿ ರಮ್ಯಾ ಅಲಿಯಾಸ್‌ ದಿವ್ಯ ಸ್ಪಂದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ನಟನಾ ಕ್ಷೇತ್ರದಲ್ಲೂ ಮಿಂಚಲು ಸಿದ್ಧವಾಗಿದ್ದಾರೆ. ಈ ನಡುವೆ ಅವರು ಅರೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುವುದಕ್ಕಾಗಿ ರಮ್ಯಾ ಅವರು ಯುರೋಪ್ ರಾಷ್ಟ್ರಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರು ಕೆಲವು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಒಂದಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಯನ್ನು ಮಾಡಿದ್ದಾರೆ.

ರಮ್ಯಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಮೊದಲು ಸಿನಿಮಾಗಳಲ್ಲಿ ನಟಿಸಿದ್ದ ಅವರು ನಂತರ ರಾಜಕೀಯದಲ್ಲಿ ತೊಡಗಿಕೊಂಡರು. ಅದನ್ನು ತೊರೆದ ಬಳಿಕ ಅವರು ಯಾರ ಕಣ್ಣಿಗೂ ಕಾಣಿಸಿಕೊಳ್ಳಲೇ ಇಲ್ಲ. ಸೋಶಿಯಲ್ ಮೀಡಿಯಾದಿಂದಲೂ ರಮ್ಯಾ ದೂರ ಆದರು. ಈಗ ರಮ್ಯಾ ಸೋಶಿಯಲ್ ಮೀಡಿಯಾ ಹಾಗೂ ನಟನೆ ಎರಡಕ್ಕೂ ಮರಳಿದ್ದಾರೆ. ಅವರು ಆಗಾಗ ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ರಮ್ಯಾ ಅವರು ಶರ್ಟ್ ಧರಿಸಿ ಫೋಟೋ ಹಾಕಿದ್ದಾರೆ. ಕೆಳ ಭಾಗದಲ್ಲಿ ಅವರು ಪ್ಯಾಂಟ್ ಆಗಲೀ ಶಾರ್ಟ್ಸ್ ಆಗಲೀ ಹಾಕಿಲ್ಲ. ಇದು ಅನೇಕರ ಕಣ್ಣು ಕುಕ್ಕಿದೆ. ಟ್ರೋಲ್ ಮಾಡಲೆಂದೇ ಕಾದು ಕೂತ ಅನೇಕರು ಈ ಫೋಟೋ ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಈ ರೀತಿಯ ಫೋಟೋ ಹಂಚಿಕೊಳ್ಳುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

See also  ಪರೀಕ್ಷೆಯಲ್ಲಿ ಅನುತ್ತೀರ್ಣನಾದದ್ದಕ್ಕೆ ಕಾಲೇಜು ಬದಲಾಯಿಸಲು ಹೇಳಿದ ಪೋಷಕರನ್ನೇ ಹತ್ಯೆಗೈದ ವಿದ್ಯಾರ್ಥಿ..! ಪೊಲೀಸ್ ಕಂಟ್ರೋಲ್ ರೂಂಗೆ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಕರೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget