ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ನಟಿ ರಮ್ಯಾ! ಅಷ್ಟಕ್ಕೂ ಮೋಹಕತಾರೆಗೆ ಏನಾಯ್ತು?

191

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನ (Sandalwood) ಮೋಹಕ ತಾರೆ ರಮ್ಯಾ (Ramya) ಏಕಾಏಕಿ ಲಂಡನ್‌ಗೆ (London) ಹಾರಿದ್ದಾರೆ. ಕಾರಣ ಪದ್ಮಾವತಿ ಅಲ್ಲಿಗೆ ಹೋಗಿದ್ದು ಚಿಕಿತ್ಸೆಗಾಗಿ.
ಚಿತ್ರರಂಗ -ರಾಜಕೀಯ ಎರಡು ಕ್ಷೇತ್ರದಲ್ಲಿ ಮಿಂಚಿದ್ದ ಮೋಹಕ ತಾರೆ ರಮ್ಯ ಚಿಕಿತ್ಸೆಗಾಗಿ (Treatment) ದೂರದ ದೇಶಕ್ಕೆ ಹೋಗಿದ್ದಾರೆ.

ಪದ್ಮಾವತಿ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿರುವ ಹೊತ್ತಲ್ಲೇ ಚಿಕಿತ್ಸೆ ಪಡೆಯಲು ಲಂಡನ್ ಗೆ ತೆರಳಿದ್ದಾರೆ. ಸದ್ಯದಲ್ಲೇ ‘ಉತ್ತರ ಕಾಂಡ’ (Uttarakanda) ಸಿನಿಮಾದಿಂದ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಅದಕ್ಕೂ ಮುನ್ನ ಲಂಡನ್‌ಗೆ ಹಾರಿದ್ದಾರೆ. ನೈಸರ್ಗಿಕ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಹೋಗಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನು ಖುದ್ದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಫ್ಯಾನ್ಸ್ ಕೂಡ ಇದನ್ನು ಕೇಳಿ ಖುಷಿಯಾಗಿದ್ದಾರೆ. ಇನ್ನು ದೇಹವನ್ನು ತೆಳ್ಳಗೆ ಮಾಡಿಕೊಂಡು ರಿಲಾಕ್ಸ್ ಆಗಿ ಬರಲು ಲಂಡನ್ ಗೆ ಹೋಗಿದ್ದಾರೆ ಎನ್ನಲಾಗಿದೆ.

See also  ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಪೂಜೆ ತಡೆಯುವಂತೆ ಮುಸ್ಲಿಂ ಸಮಿತಿ ಮನವಿ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌
  Ad Widget   Ad Widget   Ad Widget   Ad Widget   Ad Widget   Ad Widget   Ad Widget