ಕರಾವಳಿಕ್ರೀಡೆ/ಸಿನಿಮಾ

ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ,’ಚಾಂಪ್’ ನನ್ನು ಕಳೆದುಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿದ ನಟಿ ರಮ್ಯಾ

ನ್ಯೂಸ್ ನಾಟೌಟ್ : ಚುನಾವಣಾ ದಿನ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ ನಟಿ, ಮಾಜಿ ಸಂಸದೆ ರಮ್ಯಾ ಸದ್ಯ ಬೇಸರದಲ್ಲಿದ್ದಾರೆ.ಏಕೆಂದರೆ ಅವರ ಮುದ್ದಿನ ನಾಯಿ ‘ಚಾಂಪ್’ ಇನ್ನಿಲ್ಲ.ಹೀಗಂತ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಮುದ್ದಿನ ನಾಯಿಯ ಸಾವಿನಿಂದಾಗಿ ರಮ್ಯಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಕಾಂಗ್ರೆಸ್​​ನ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಪ್ರೀತಿಯ ನಾಯಿಯ ಸಾವಿನಿಂದ ನೊಂದು ಹೋಗಿದ್ದಾರೆ. ಹೀಗಾಗಿ ಸದ್ಯ ಪ್ರಚಾರ ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ.ಇಂದು ಬೆಂಗಳೂರಿನ ಬಸವನಗುಡಿ, ಜಯನಗರ, ಹೆಬ್ಬಾಳದಲ್ಲಿ ರಮ್ಯಾ ಪ್ರಚಾರ ಕಾರ್ಯ ನಿಗದಿಯಾಗಿತ್ತು. ಇದೀಗ ಮುದ್ದಿನ ‘ಚಾಂಪ್’ ನಿಧನದಿಂದ ಪ್ರಚಾರ ಕಾರ್ಯಕ್ರಮಗಳಿಗೆ ಗೈರಾಗಿದ್ದು,ಅಭಿಮಾನಿಗಳು ನಿರಾಶರಾಗಿದ್ದಾರೆ.

ನಿನ್ನೆ ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿತ್ತು, ಅವನನ್ನು ದಯವಿಟ್ಟು ಹುಡುಕಲು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ‘ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು’ ಎಂದು ಅವರು ಹೇಳಿಕೊಂಡಿದ್ದರು.

Related posts

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?

9 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಈಕೆಗೆ ಎರಡು ಗರ್ಭಕೋಶ, ಎರಡು ಜನನೇಂದ್ರಿಯ!!ಇದು ಗರ್ಭಾಶಯದ ಡಿಡೆಲ್ಸಿಸ್ ಕಾಯಿಲೆ?ಏನಿದು? ರೋಗಲಕ್ಷಣಗಳೇನು?ಇಲ್ಲಿದೆ ಮಾಹಿತಿ..