ಕ್ರೀಡೆ/ಸಿನಿಮಾ

ನಟಿ ರಮ್ಯ ಜತೆ ತಮಿಳ್ ನಟ ಧನುಷ್ ಫೋಟೋ ವೈರಲ್‌, ಫ್ಯಾನ್ಸ್‌ ಹೇಳೋದೇನು?

ವರದಿ: ಕೃತಿ ಗಣೇಶ್

ನ್ಯೂಸ್ ನಾಟೌಟ್:    ಸ್ಯಾಂಡಲ್ ವುಡ್‌ನ ಖ್ಯಾತ ನಟಿ ರಮ್ಯ ಕನ್ನಡದ ಚಿತ್ರರಂಗದಲ್ಲಿ ಭಾರಿ ಯಶಸ್ಸುಗಳಿಸಿದವರು. ಚಿತ್ರರಂಗದಿಂದ ಸಾಕಷ್ಟು ದೂರ ಇದ್ದ ರಮ್ಯ ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ. ತಮಿಳಿನ ಖ್ಯಾತ ನಟ ಧನುಷ್ ಜತೆ ಇವರ ಫೋಟೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಅಭಿಮಾನಿಗಳು ಇಬ್ಬರ ನಡುವೆ ಏನೋ ಇರಬೇಕೆಂದು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬಹಿರಂಗವಾಗಿಯೇ ಬರೆದುಕೊಂಡಿದ್ದಾರೆ. 

ಇಬ್ಬರ ನಡುವಿನ ಸಂಬಂಧಕ್ಕೆ ಹೆಚ್ಚಿನ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ. ಏಕೆಂದರೆ ಇಡೀ ಇಂಡಸ್ಟ್ರಿಯಲ್ಲಿ ಇಬ್ಬರು ದಿ ಬೆಸ್ಟ್ ಫ್ರೆಂಡ್ಸ್ ಅಂತ ಕೆಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಇಬ್ಬರು ಮುಂದಿನ ದಿನಗಳಲ್ಲಿ ಹೊಸ ಸಿನಿಮಾ ಮಾಡಬಹುದು ಎಂದು ಅಂದಾಜಿಸಲಾಗಿದೆ.

Related posts

ಕ್ಯಾನ್ಸರ್ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕಿಚ್ಚ!

3000 ಕೋಟಿ ರೂ. ನುಂಗಿ ನೀರು ಕುಡಿದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ, ಏನಿದು ಮತ್ತೊಂದು ಪ್ರಕರಣ?

ವಿವಾಹವಾದ 8 ವರ್ಷ ನಂತರ ಭಾರತೀಯ ಕ್ರಿಕೆಟರ್ ಶಿಖರ್ ಧವನ್, ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ..!