ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಜೈಲಿನಲ್ಲಿರುವ ನಟ ದರ್ಶನ್ ನನ್ನು ಭೇಟಿಯಾದ ನಟಿ ರಕ್ಷಿತಾ..! ದರ್ಶನ್ ಸ್ಥಿತಿಯ ಬಗ್ಗೆ ನಟಿ ಹೇಳಿದ್ದೇನು..?

245

ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ ಬಳಿಕ ಹಲವು ಅಭಿಮಾನಿಗಳು ದರ್ಶನ್ ನನ್ನು ಭೇಟಿಯಾಗಲು ಬಂದು ನಿರಾಶರಾಗಿದ್ದಾರೆ. ಇದರ ನಡುವೆ ಚಿತ್ರರಂಗದ ಹಲವರು ದರ್ಶನ್ ನನ್ನು ಭೇಟಿ ಮಾಡುತ್ತಿದ್ದು, ಜೂನ್ 29 ರಂದು ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ನನ್ನು ಶನಿವಾರ ನಟಿ ರಕ್ಷಿತಾ ಹಾಗೂ ನಟ, ನಿರ್ದೇಶಕ ಪ್ರೇಮ್‌ ಭೇಟಿಯಾಗಿದ್ದಾರೆ. ದರ್ಶನ್ ​ರ ಆಪ್ತರಾದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿದ ವಿಷಯಗಳ ಬಗ್ಗೆ ಯಾವುದೇ ವಿಚಾರವನ್ನು ಸಹ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿಲ್ಲ.

ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತಾ ಹಾಗೂ ಪ್ರೇಮ್, ದರ್ಶನ್ ಆರೋಗ್ಯವಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.

Click 👇

https://newsnotout.com/2024/06/dengue-6-year-old-baby-nomre-health-care-kannada-news-chikkamagaluru
https://newsnotout.com/2024/06/school-sindhi-tamanna-bhatia-text-in-school-text-book-perents-opp
See also  ಚಾರ್ಮಾಡಿ: KSRTC ಬಸ್‌ಗಳ ಅಪಘಾತದ ಟ್ರಾಫಿಕ್‌ನಲ್ಲಿ ಹೆರಿಗೆ ನೋವಿನಿಂದ ಗಂಟೆಗಟ್ಟಲೆ ಒದ್ದಾಡಿದ ಗರ್ಭಿಣಿ..! ಆಂಬ್ಯುಲೆನ್ಸ್‌ ಚಾಲಕ ಆರೀಫ್‌ನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget