ಕ್ರೀಡೆ/ಸಿನಿಮಾಕ್ರೈಂ

ಖ್ಯಾತ ಕಿರುತೆರೆ ನಟಿ ಸಾವು..! ಕಾರು ಅಪಘಾತದ ಸುತ್ತ ಹಲವು ಅನುಮಾನ!

327

ನ್ಯೂಸ್‌ನಾಟೌಟ್‌: ಕಾರ್ ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಯ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದದಲ್ಲಿ ನಡೆದ ಅಪಘಾತದಲ್ಲಿ 32 ವರ್ಷದ ವೈಭವಿ ಮೃತರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇಂದು (ಮೇ 24) ಬೆಳಗ್ಗೆ ಮುಂಬೈನಲ್ಲಿ ವೈಭವಿ ಉಪಾಧ್ಯಾಯ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ. ಮಂಗಳವಾರ ಗೆಳೆಯನ ಜೊತೆಯಲ್ಲಿ ವೈಭವಿ ಉಪಾಧ್ಯಯ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೆ ಒಳಗಾಗಿತ್ತು. ಮಧ್ಯಾಹ್ನ ಕಾರ್ ಅಪಘಾತ ಸಂಭವಿಸಿದೆ. ಇದರ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

ಕಾರ್ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ವಿಷಯ ತಿಳಿಯುತ್ತಿದ್ದಂತೆ ನಟಿ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.

ಖ್ಯಾತ ಸಾರಾಭಾಯಿ ವರ್ಸಸ್ ಸಾರಾಭಾಯಿ ಧಾರಾವಾಹಿಯಲ್ಲಿ ವೈಭವಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಜಾಸ್ಮೀನ್ ಪಾತ್ರ ನಟಿಗೆ ಹೆಸರು ತಂದು ಕೊಟ್ಟಿತ್ತು. ದೀಪಿಕಾ ಪಡುಕೋಣೆಯ ಛಾಪಕ್ ಸಿನಿಮಾದಲ್ಲಿಯೂ ವೈಭವಿ ನಟಿಸಿದ್ದರು.  ಈ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದರು.

See also  ಭಾರತದ ವೇಗದ ಬೌಲರ್ ಆರ್ಷದೀಪ್ ಸಿಂಗ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget