ಕ್ರೀಡೆ/ಸಿನಿಮಾಬೆಂಗಳೂರುವೈರಲ್ ನ್ಯೂಸ್

ನಟಿ ಲೀಲಾವತಿಯನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ..! ಹಿರಿಯ ನಟಿಯ ಆಪ್ತೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಾ..?

ನ್ಯೂಸ್ ನಾಟೌಟ್ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಕಳೆದ ವಾರ ಕೊನೆಯುಸಿರೆಳೆದಿದ್ದರು. ಇಂದು (ಡಿ.14) ವಿನೋದ್‌ ರಾಜ್‌ ಹಾಗೂ ಲೀಲಾವತಿಯ ಆಪ್ತ ವಲಯದಲ್ಲಿದ್ದ ಮತ್ತು ನಟಿ ಲೀಲಾವತಿಯ ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.

65 ವರ್ಷ ವಯಸ್ಸಿನವರಾದ ಬಂಗಾರಮ್ಮ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಂಗಾರಮ್ಮ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಂಗಾರಮ್ಮ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್‌ ರಾಜ್‌ಗೆ ತುಂಬಾ ಆಪ್ತರಾಗಿದ್ದರು. ಬಂಗಾರಮ್ಮ ಚಿಕ್ಕವಯಸ್ಸಿನಿಂದಲೂ ಲೀಲಾವತಿ ಜೊತೆಗೆ ಇರುತ್ತಿದ್ದರು, ಲೀಲಾವತಿ ಚೆನ್ನೈನಲ್ಲಿ ವಾಸವಾಗಿದ್ದಾಗಲೂ ಅವರೊಂದಿಗೆ ಬಂಗಾರಮ್ಮ ಇದ್ದರು ಎನ್ನಲಾಗಿದೆ.

ಸದಾ ಲೀಲಾವತಿ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಇತ್ತೀಚಿಗೆ ಹಾಸಿಗೆ ಹಿಡಿದಿದ್ದರು. ಕಳೆದ ಶುಕ್ರವಾರ ಡಿಸೆಂಬರ್‌ 8ರಂದು ವಯೋಸಹಜವಾಗಿ ನಟಿ ಲೀಲಾವತಿ ವಿಧಿವಶರಾದರು.

ಲೀಲಾವತಿ ಸಾವಿನ ಸುದ್ದಿ ಕೇಳಿ ಬಂಗಾರಮ್ಮ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು ಎನ್ನಲಾಗಿದೆ, ಲೀಲಾವತಿ ಸಾವಿನ ಬೆನ್ನಲ್ಲೇ ಬಂಗಾರಮ್ಮ ಕೂಡ ವಿಧಿವಶರಾಗಿದ್ದಾರೆ.
ಇನ್ನು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಬಂಗಾರಮ್ಮರನ್ನು ವಿನೋದ್‌ ರಾಜ್ ನೋಡಿಕೊಳ್ಳುತ್ತಿದ್ದರು. ಅವರಿಗಾಗಿಯೇ ಓರ್ವ ನರ್ಸ್ ನೇಮಿಸಿ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

Related posts

‘ಆಂಗ್ರಿ ರಾಂಟ್‌ಮ್ಯಾನ್’ ಖ್ಯಾತಿಯ ಯೂಟ್ಯೂಬರ್ ಹಠಾತ್ ನಿಧನ..! 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಸಿನಿಮಾ ವಿಮರ್ಶಕ

ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿದ ಹೆಲಿಕಾಪ್ಟರ್ ಪತನ..! 3 ಮಂದಿ ಸಾವು, ಹಲವರು ಆಸ್ಪತ್ರೆಗೆ ದಾಖಲು

‘ತುನಿವು’ ಚಿತ್ರ ತೆರೆಗಪ್ಪಳಿಸಿದ ಸಂಭ್ರಮದಲ್ಲಿ ತೇಲಾಡಿದ ಯುವಕ:ಟ್ರಕ್ ನಿಂದ ಕೆಳಗೆ ಬಿದ್ದು ಅಜಿತ್ ಅಭಿಮಾನಿ ದುರಂತ ಅಂತ್ಯ