ಕ್ರೀಡೆ/ಸಿನಿಮಾರಾಜಕೀಯ

ನಟಿ ಖುಷ್ಬೂ ಅತ್ತೆಯಿಂದ ಆಶಿರ್ವಾದ ಪಡೆದ ಮೋದಿ, ನಟಿ ಈ ಬಗ್ಗೆ ಹೇಳಿದ್ದೇನು..?

231

ನ್ಯೂಸ್ ನಾಟೌಟ್ : ನಟನೆಯಿಂದ ದೂರ ಉಳಿದು ರಾಜಕೀಯದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ನಟಿ ಖುಷ್ಬು ಸುಂದರ್, ಮೋದಿಯನ್ನು ಭೇಟಿ ಮಾಡಿಸುವ ಮೂಲಕ ತನ್ನ ಅತ್ತೆಯ ಕನಸನ್ನು ನನಸು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಯನ್ನು ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಖುಷ್ಬೂ ಜೊತೆಗೆ ಆಕೆಯ ಅತ್ತೆ ದೇವನೈ ಚಿದಂಬರಂ ಪಿಳ್ಳೈ ಕೂಡ ಮೋದಿಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ಖುಷ್ಬೂ ಅತ್ತೆಯ ಆಶೀರ್ವಾದ ಪಡೆದರು.

ಮೋದಿಯನ್ನು ನೋಡಿ ತುಂಬಾ ಸಂತೋಷವಾಯಿತು. ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಖುಷ್ಬೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ಮೋದಿ ಅವರ ಅಭಿಮಾನಿಯಾಗಿರುವ ನನ್ನ ಅತ್ತೆ ಶ್ರೀಮತಿ ದೇವನೈ ಚಿದಂಬರಂ ಅವರನ್ನು ಕರೆದು ಭೇಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಇಷ್ಟು ಸಂತೋಷ ನೀಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಲು ಪದಗಳೇ ಸಾಲದು ಎಂದ್ರು. ಒಮ್ಮೆಯಾದರೂ ಮೋದಿಯನ್ನು ಖುದ್ದಾಗಿ ಭೇಟಿಯಾಗಬೇಕೆಂಬುದು ನಮ್ಮ ಅತ್ತೆಯ ಬಹುದಿನದ ಕನಸಾಗಿತ್ತು. ತನ್ನ ತಾಯಿಯೊಂದಿಗೆ ಮಾತನಾಡುವ ಮಗನಂತೆ ಮೋದಿ ಅವರು ನಮ್ಮ ಅತ್ತೆಯ ಬಳಿ ಮಾತಾಡಿದ್ರು. ನನ್ನ ಅತ್ತೆಯ ಆಶೀರ್ವಾದ ಪಡೆದರು. ಮೋದಿಜಿ ನಿಮಗೆ ನಾವು ಸದಾ ಋಣಿಯಾಗಿದ್ದೇವೆ” ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಸದ್ಯ ಖುಷ್ಬೂ ಸುಂದರ್ ಸಿನಿಮಾ ಲೋಕದಿಂದ ದೂರವಾಗಿ ರಾಜಕೀಯದಲ್ಲಿ ಸಂಪೂರ್ಣ ಸಕ್ರಿಯರಾಗಿದ್ದಾರೆ.

https://newsnotout.com/2024/01/school-college-leave-dk-rama/
See also  ಸರ್ವಪಕ್ಷಗಳ ಆಯ್ದ ಸಂಸದರನ್ನು ಹಲವು ದೇಶಗಳಿಗೆ ಕಳುಹಿಸಿದ ಕೇಂದ್ರ ಸರ್ಕಾರ..! ಪಾಕ್ ಉಗ್ರವಾದದ ವಿರುದ್ಧ ರಾಜತಾಂತ್ರಿಕ ಹೋರಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget