ಕ್ರೀಡೆ/ಸಿನಿಮಾದೇಶ-ವಿದೇಶ

ಲೆನ್ಸ್‌ ಧರಿಸಿ ಎಡವಟ್ಟು ಮಾಡಿಕೊಂಡ ಖ್ಯಾತ ನಟಿ..! ಮುಂದೇನಾಯ್ತು..? ಇಲ್ಲಿದೆ ಸಂಪೂರ್ಣ ವಿವರ

ನ್ಯೂಸ್‌ ನಾಟೌಟ್‌: ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ರಾಜಸ್ಥಾನ ಮೂಲದ ಬಹುಭಾಷಾ ನಟಿ ಜಾಸ್ಮಿನ್ ಭಾಸಿನ್‌ ಅವರು ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದಾರೆ. ಲೆನ್ಸ್‌ ಧರಿಸಿ ಎದುರಾಗಿರುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಲೆನ್ಸ್ ಸರಿಯಾಗಿ ಧರಿಸದ ಕಾರಣ ಕಣ್ಣು ಕಾಣಿಸುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಜುಲೈ 17 ರಂದು ಲೆನ್ಸ್ ಧರಿಸಿದ ನಂತರ ನಟಿಗೆ ಕಣ್ಣುಗಳು ತುಂಬಾ ನೋಯಲಾರಂಭಿಸಿದ್ದವು. ತಕ್ಷಣ ವೈದ್ಯರನ್ನು ನೋಡಲು ಸಾಧ್ಯವಾಗದೆ ಬಳಿಕ ದೆಹಲಿಯಲ್ಲಿ ನಡೆದ ಈವೆಂಟ್‌ ನ ವೇಳೆ ನಟಿ ಸನ್‌ಗ್ಲಾಸ್ ಧರಿಸಿದ್ದರು. ಬಳಿಕ ಕಣ್ಣು ಕಾಣಿಸದಂತಾಗಿ ವೈದ್ಯರ ಮೊರೆ ಹೋಗಿದ್ದಾರೆ. ಲೆನ್ಸ್ ಸರಿಯಾಗಿ ಧರಿಸದ ಕಾರಣ ಜಾಸ್ಮಿನ್ ಭಾಸಿನ್ ಕಾರ್ನಿಯಲ್ ಹಾನಿಯಿಂದ ಬಳಲುತ್ತಿದ್ದು, ನಟಿಯ ಕಣ್ಣಿಗೆ ಬ್ಯಾಂಡೇಜ್‌ ಹಾಕಲಾಗಿದೆ.

ಇದೀಗ ನಟಿಯ ಕಣ್ಣಿನ ಕಾರ್ನಿಯಾಗಳು ಹಾನಿಗೊಳಗಾಗಿವೆ. ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ‘ನಾನು ತುಂಬಾ ನೋವು ಅನುಭವಿಸುತ್ತಿದ್ದೇನೆ. ಮುಂದಿನ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು’ ಎಂದು ನಟಿ ಹೇಳಿದ್ದಾರೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಈ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದರೂ ಶಾಶ್ವತವಾಗಿ ಸಮಸ್ಯೆ ಎದುರಿಸಬೇಕಾಗಬಹುದು.

Related posts

ಪದೇ-ಪದೆ ರೈಲುಗಳ ಹಳಿ ತಪ್ಪಿಸಲು ಯತ್ನ..! ರೈಲ್ವೇ ಹಳಿಯ ಮೇಲೆ ಅಡುಗೆ ಸಿಲಿಂಡರ್..! ಬಾಲಾಪರಾಧಿಗಳು ವಶಕ್ಕೆ..!

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪಿ ಕರ್ನಾಟಕದಲ್ಲಿ ಪತ್ತೆ..! ಖಾನ್ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು..!

ನಟಿ ಮಲೈಕಾ ಅರೋರ ಮಾಜಿ ಪತಿ ಅರ್ಬಾಜ್ ಖಾನ್ ವಿವಾಹ..! ಹೊಸ ಜೀವನಕ್ಕೆ ಕಾಲಿಟ್ಟ ಸಲ್ಮಾನ್ ಖಾನ್ ಸಹೋದರ..!ಹುಡುಗಿ ಯಾರು ಗೊತ್ತೆ..?