ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಅಪ್ರಾಪ್ತ ಬಾಲಕನನ್ನು ಸೆಕ್ಸ್‌ ಗೆ ಬಳಸಿದ ನಟಿ..? ಅರೆಸ್ಟ್ ಆಗಿದ್ದ ನಟಿ ಕೋರ್ಟ್ ಅಲ್ಲಿ ಹೇಳಿದ್ದೇನು..?

ನ್ಯೂಸ್ ನಾಟೌಟ್: ಸಿನಿಮಾ ಜೊತೆಗೆ ತನ್ನ ಲುಕ್ ಗಳಿಂದ ಭಾರಿ ಜನಪ್ರಿಯತೆಗಳಿಸಿರುವ ನಟಿ ಇದೀಗ ಅಪ್ರಾಪ್ತ ಬಾಲಕನ ಸೆಕ್ಸ್‌ಗೆ ಬಳಸಿಕೊಂಡ ಆರೋಪ ಎದುರಿಸುತ್ತಿದ್ದಾರೆ.

ಕಳೆದ ನವೆಂಬರ್ ತಿಂಗಳಲ್ಲಿ ಅರೆಸ್ಟ್ ಆಗಿದ್ದ ನಟಿ ಇದೀಗ ಕೋರ್ಟ್‌ಗೆ ಹಾಜರಾಗಿದ್ದಾರೆ.ಹಾರರ್ ಚಿತ್ರಗಳಲ್ಲಿ ಸಿನಿ ರಸಿಕರನ್ನು ಬೆಚ್ಚಿ ಬೀಳಿಸಿದ ಆಸ್ಟ್ರೇಲಿಯಾ ನಟಿ ಮೆಗನ್ ಸ್ಕೈ ಬ್ಲಾಂಕೆಡಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಿಕಿನಿ ಮೂಲಕವೇ ಹೆಚ್ಚು ಸದ್ದು ಮಾಡಿದ್ದಾರೆ.ಕಳೆದ ನವೆಂಬರ್ ತಿಂಗಳಲ್ಲಿ ಹಾಲಿವುಡ್ ನಟಿ ಮೆಗನ್ ಸ್ಕೈ ಬಂಧನ ಭಾರಿ ಸಂಚಲನ ಸೃಷ್ಟಿಸಿತ್ತು.

ಅಪ್ರಾಪ್ತ ಬಾಲಕರನ್ನು ಲೈಂಗಿಕ ಕ್ರಿಯೆಗೆ ಬಳಿಸಿಕೊಂಡ ಆರೋಪದಡಿ ಮೆಘನ್ ಸ್ಕೈ ಅರೆಸ್ಟ್ ಆಗಿದ್ದರು.34 ವರ್ಷದ ನಟಿ ಸೆಕ್ಸ್‌ಗಾಗಿ 16 ವರ್ಷದ ಬಾಲಕನ ಬಳಸಿಕೊಂಡಿದ್ದಾರೆ ಅನ್ನೋ ಗಂಭೀರ ಆರೋಪ ಈಕೆಯ ಮೇಲಿದೆ. ಕೆಲ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ನಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.ಅರೆಸ್ಟ್ ಬಳಿಕ ನಟಿ ಫೋನ್ ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಅಪ್ರಾಪ್ತ ಬಾಲಕರ ಜೊತೆಗಿನ ಸೆಕ್ಸ್ ಚಾಟ್ ಸೇರಿದಂತೆ ಹಲವು ಫೋಟೋ ಹಾಗೂ ವಿಡಿಯೋಗಳು ಲಭ್ಯವಾಗಿತ್ತು.

ವಿಚಾರಣೆ ಬಳಿಕ ಪೊಲೀಸರು ನಟಿ ಮೇಲೆ ಮಕ್ಕಳ ಮೇಲೆ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ ನಟಿ ಸುದೀರ್ಘ ದಿನಗಳ ಕಾಲ ಜೈಲಿನಲ್ಲೇ ಕಳೆಯಬೇಕಾಗಿ ಬಂದಿತ್ತು.ಜಾಮೀನು ಮೂಲಕ ಬಿಡುಗಡೆಯಾಗಿರುವ ನಟಿ ಇದೀಗ ಆಡಿಲೇಡ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದಾರೆ. ಆರೋಪದ ಕುರಿತು ಹಲವು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಆದರೆ, ಎಲ್ಲಾ ಪ್ರಶ್ನೆಗಳಿಗೆ ಮೌನವಾಗಿ ನಿಂತಿದ್ದರು ಎನ್ನಲಾಗಿದೆ. ನಟಿ ಮೇಲಿನ ಮಕ್ಕಳ ಲೈಂಗಿಕ ದೌರ್ಜನ್ಯ ಆರೋಪದ ಕುರಿತ ಈ ಪ್ರಕರಣವನ್ನು ಆಡಿಲೇಡ್ ಕೋರ್ಟ್ ಮೇ 1ಕ್ಕೆ ಮುಂದೂಡಿದೆ ಎಂದು ವರದಿ ತಿಳಿಸಿದೆ.

Related posts

ರಕ್ಷಣೆ ನೀಡುವಂತೆ ಮೋದಿಗೆ ಪತ್ರ ಬರೆದ ಮುಡಾ ದೂರುದಾರ..! ಗನ್ ಮ್ಯಾನ್ ನೀಡುವಂತೆ ಪೊಲೀಸ್​ ಆಯುಕ್ತರಿಗೆ ಕೇಳಿದ್ದೆ ಎಂದ ಸ್ನೇಹಮಯಿ ಕೃಷ್ಣ ..!

ಸೌಜನ್ಯ ಪ್ರಕರಣದ ಕುರಿತು ಇಂದು ಹೈಕೋರ್ಟ್ ತೀರ್ಪು..! ಮರುತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲಿದೆಯಾ ಕೋರ್ಟ್? ಅರ್ಜಿ ಸಲ್ಲಿಸಿದವರ್ಯಾರು?

ಮಹಿಳೆಯರನ್ನು ಅವಮಾನಿಸುವುದನ್ನು ಸಹಿಸಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮೊದಲ ಪ್ರತಿಕ್ರಿಯೆ