ವೈರಲ್ ನ್ಯೂಸ್ಸಿನಿಮಾ

ನಟಿ ಹರಿಪ್ರಿಯಾ ಧಾರಾವಾಹಿಯಲ್ಲಿ ನಟಿಸಲಿದ್ದಾರಾ..? ಏನಿದು ವೈರಲ್​ ಪೋಸ್ಟ್..?

37
Spread the love

ನ್ಯೂಸ್ ನಾಟೌಟ್: ನಟಿ ಹರಿಪ್ರಿಯಾ ಹಲವು ಸಿನಿಮಾಗಳನ್ನು ನಟಿಸಿ ಖ್ಯಾತಿ ಪಡೆದಿದ್ದಾರೆ. 2020ರ ನಂತರ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಇದೆಲ್ಲದರ ನಡುವೆ ಅವರು ಹೊಸ ಸೀರಿಯಲ್​ನಲ್ಲಿ (Kannada Serial) ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಖಾಸಗಿ ವಾಹಿನಿಯೊಂದು ಹಂಚಿಕೊಂಡಿರುವ ಪ್ರೋಮೋ ದಲ್ಲಿ ನಟಿ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಮೂಡಿಸಿದೆ.

‘ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಶೀಘ್ರದಲ್ಲಿ!’ ಎಂಬ ಕ್ಯಾಪ್ಷನ್​ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಈ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ಅವರು ಅಡ್ವೊಕೇಟ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕೆ ಕಮೆಂಟ್ ಮಾಡಿರುವ ಅಭಿಮಾನಿಗಳು ‘ನಮ್ಮ ಹರಿಪ್ರಿಯಾ ಸೀರಿಯಲ್​ ನಲ್ಲಿ ನಟಿಸ್ತಾರಾ ಎಂದ ಅಚ್ಚರಿ ವ್ಯಕ್ತವಾಗಿದೆ. ಪ್ರೋಮೋ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಇದು ಧಾರಾವಾಹಿಯೋ ಅಥವಾ ರಿಯಾಟಿಲಿ ಶೋಗೆ ಸಂಬಂಧಿಸಿದ ಪ್ರೋಮೋ ಆಗಿರಬಹುದಾ ಎಂಬ ಅನುಮಾನ ಕೂಡ ಇದೆ. ಒಂದು ವೇಳೆ ಸೀರಿಯಲ್​ ಆಗಿದ್ದರೆ, ಅದರಲ್ಲಿ ಹರಿಪ್ರಿಯಾ ಒಂದು ಅತಿಥಿ ಪಾತ್ರ ಮಾಡಿರುವ ಸಾಧ್ಯತೆ ಇದೆ. ಅವರಿಂದಾಗಿ ಸೀರಿಯಲ್​ಗೆ ಸ್ಟಾರ್​ ಮೆರುಗು ಸಿಗಲಿ ಎಂಬ ಉದ್ದೇಶ ಇದ್ದರೂ ಇರಬಹುದು ಎನ್ನಲಾಗಿದೆ.

See also  ಕನ್ನಡ ರಾಜ್ಯೋತ್ಸವದ ದಿನ ಮರಾಠರು ಕರಾಳ ದಿನ ಆಚರಿಸುತ್ತಿರುವುದೇಕೆ? ಮುಂಬೈ - ಕರ್ನಾಟಕ ಸರ್ಕಾರಿ ಸಾರಿಗೆ ರದ್ದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget