ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ನಾನು ಆತನ ಜೊತೆಗೆ ಮಲಗಿದ್ದರೆ ಇಂದು 30 ಚಿತ್ರಗಳನ್ನು ಪೂರೈಸುತ್ತಿದ್ದೆ’..! ಸ್ಪೋಟಕ ಹೇಳಿಕೆ ನೀಡಿದ ನಟಿ ಯಾರು?

212

ನ್ಯೂಸ್‌ ನಾಟೌಟ್‌: ಈಕೆ ಹಿಂದಿ ಮತ್ತು ತೆಲುಗು ಚಿತ್ರರಂಗದ ಖ್ಯಾತ ಹೆಸರಿರುವ ನಟಿ . ಆಕೆ ವಿವಿಧ ವಿಷಯಗಳ ಕುರಿತು ನಿರ್ಭಯವಾಗಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ ಆಕೆ ತನ್ನ 11 ನೇ ಚಿತ್ರವನ್ನು ಘೋಷಿಸಿದ್ದಾಳೆ. ಈ ಸಂದರ್ಭದಲ್ಲಿ, ನಟಿ ಪಾಯಲ್ ಘೋಷ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡು, ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಹೆಚ್ಚಿನ ಚಿತ್ರಗಳನ್ನು ಪಡೆಯಲು ನೀವು ಮಲಗಬೇಕು ಎಂದು ಆಕೆ ತನ್ನ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾಳೆ. ಪ್ರಸ್ತುತ ಆಕೆಯ ಈ ಹೇಳಿದೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ತನ್ನ Instagram ಖಾತೆಯಲ್ಲಿ ತನ್ನ 11 ನೇ ಚಿತ್ರವನ್ನು ಘೋಷಿಸಿರುವ, ಪಾಯಲ್ ಉದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆಯೂ ಬಹಿರಂಗ ಹೇಳಿಕೆ ನೀಡಿದ್ದಾಳೆ. “ಪ್ಯಾರ್ ಕಿ ಆಗ್: ರೈಡ್‌ನೊಂದಿಗೆ, ನಾನು ನನ್ನ 11 ನೇ ಚಿತ್ರವನ್ನು ಪೂರ್ಣಗೊಳಿಸಿದ್ದೇನೆ.

ನಾನು ಮಲಗಿದ್ದರೆ, ಇಂದು ನನ್ನ 30 ಪೂರ್ಣಗೊಳ್ಳುತ್ತಿದ್ದವು” ಎಂದು ಆಕೆ ಬರೆದುಕೊಂಡಿದ್ದಾಳೆ. ಮಂಚ ಹತ್ತಲು ನಿರಾಕರಿಸಿದ್ದಕ್ಕಾಗಿ ಅನೇಕ ಚಲನಚಿತ್ರಗಳು ನನ್ನಿಂದ ದೂರಾದವು ಎಂದು ಆಕೆ ಹೇಳಿದ್ದಾಳೆ. ಆದರೆ, ನಂತರ ಪಾಯಲ್ ತನ್ನ ಪೋಸ್ಟ್ ಅನ್ನು ಅಳಿಸಿದ್ದಾರೆ. ಇಡೀ ಸಮಸ್ಯೆ ಏನೆಂದು ಅರ್ಥಮಾಡಿಕೊಳ್ಳುವ ಮೊದಲೇ ಪಾಯಲ್ ತನ್ನ ಪೋಸ್ಟ್ ಡಿಲೇಟ್ ಮಾಡಿದ್ದರಿಂದ, ಕೆಲವರು ಆಕೆಯನ್ನು ಟೀಕಿಸುತ್ತಿದ್ದರೆ, ಕೆಲವರು ಆಕೆಯ ಬೆಂಬಲಕ್ಕೆ ನಿಂತು ಹೆಚ್ಚಿನ ವಿವರ ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧವೂ ಪಾಯಲ್ ಗಂಭೀರ ಆರೋಪ ಮಾಡಿದ್ದರು. ಪಾಯಲ್ ಘೋಷ್ ಅವರು ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದರು.

See also  ಮಂಗಳೂರು : ಬೈಕ್ ಸವಾರರ ಮೇಲೆ ಹರಿದ ಖಾಸಗಿ ಬಸ್‌! ಮುಂದೇನಾಯ್ತು? ಇಲ್ಲಿದೆ ಭೀಕರ ವಿಡಿಯೋ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget