ಕರಾವಳಿ

ಖ್ಯಾತ ಹಾಸ್ಯ ನಟನಿಂದ ನಟಿಯರಿಗೆ ಅಶ್ಲೀಲ ವಿಡಿಯೋ ಸಂದೇಶ..?

ನ್ಯೂಸ್ ನಾಟೌಟ್: ಸಿನಿಮಾ, ಧಾರವಾಹಿಗಳಲ್ಲಿ ಜನರನ್ನು ನಕ್ಕು ನಗಿಸುತ್ತಿದ್ದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ವಿರುದ್ಧ ಇದೀಗ ನಟಿಯರಿಗೆ ಅಶ್ಲೀಲ ವಿಡಿಯೋ ಕಳಿಸಿದ ಗಂಭೀರ ಆರೋಪ ಎದುರಾಗಿದೆ.

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ, ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ವಿರುದ್ಧ ಹಿರಿಯ ಪೋಷಕ ನಟಿ ರಾಣಿ ಗಂಭೀರ ಆರೋಪ ಮಾಡಿದ್ದಾರೆ.

ಕರ್ನಾಟಕ ಚಲನಚಿತ್ರ ಪೋಷಕರ ಸಂಘದಿಂದ ಅನೇಕರಿಗೆ ತುಂಬ ಒಳ್ಳೆಯದಾಗಿದೆ. ಇವತ್ತು ನಾನು ಸಂಘದ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ಡಿಂಗ್ರಿ ನಾಗರಾಜ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ವಿರುದ್ಧ ನಾನು ಆರೋಪ ಮಾಡುತ್ತಿದ್ದೇನೆ. ನಾವು ಯಾವುದಾದರೂ ವಿಷಯವನ್ನು ನೇರವಾಗಿ ಹೇಳಿದರೆ ಅವರಿಗೆ ಬೇಕಾದ ಹಾಗೆ ಉತ್ತರ ನೀಡುತ್ತಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಮಹಿಳೆಯರ ಬಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅಷ್ಷೇ ಅಲ್ಲ ಪೋಷಕ ಕಲಾವಿದರ ಸಂಘದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಡಿಂಗ್ರಿ ನಾಗರಾಜ್ ವಿರುದ್ಧ ರಾಣಿ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ವರ್ಷ ಕಾನಿಷ್ಕ ಹೋಟೆಲ್‌ನಲ್ಲಿ ಅಶ್ಲೀಲ ವಿಡಿಯೊ ವಿಚಾರವಾಗಿ 300 ಜನರ ಮಧ್ಯೆ ಜಗಳ ಆಗಿದೆ. ಆಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಕಳೆದ ತಿಂಗಳು ನನ್ನನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಯಾರು ಯಾರನ್ನೋ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಮ್ಮ ಐಡಿಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಮೊದಲ ಹೆಜ್ಜೆ ತೆಗೆದುಕೊಂಡು ಮಾಧ್ಯಮದ ಮುಂದೆ ಬಂದಿದ್ದೇನೆ, ಸಾಕಷ್ಟು ಹಿರಿಯ ಕಲಾವಿದರಿಗೂ ಈ ವಿಷಯವನ್ನು ತಿಳಿಸಿದ್ದೇನೆ ಎಂದು ರಾಣಿ ಹೇಳಿದ್ದಾರೆ.

Related posts

“CM ಸಿದ್ದರಾಮಯ್ಯನವರೇ ಎಷ್ಟೇ ಹುಡುಕಾಡಿದ್ರೂ ಹೆಣ್ಣೇ ಸಿಕ್ತಿಲ್ಲ, ದಯವಿಟ್ಟು ‘ಕನ್ಯೆಭಾಗ್ಯ ಕೊಡಿ”, ಜಾಲತಾಣದಲ್ಲಿ ಏನಿದು ಯುವಕನ ವಿಚಿತ್ರ ಮನವಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ದಿಢೀರ್ ಸ್ಥಗಿತಗೊಂಡ ವಿದ್ಯುತ್‌..! ವಿಮಾನಗಳ ಹಾರಾಟ ಸ್ಥಗಿತ, ಪ್ರಯಾಣಿಕರ ಪರದಾಟ

ಸುಳ್ಯ:ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದ ಸ.ಪ್ರ.ದ. ಕಾಲೇಜು ರಸ್ತೆ,ಕೂಡಲೇ ಸರಿಪಡಿಸುವಂತೆ ಸ್ಥಳೀಯರಿಂದ ಒತ್ತಾಯ