ಕರಾವಳಿಕ್ರೈಂ

ನಟ ವಿನೋದ್​ ಟೈಗರ್​ ಪ್ರಭಾಕರ್ ಸೌಜನ್ಯ ಪ್ರಕರಣದ ಕುರಿತು ಹೇಳಿದ್ದೇನು? ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಹೇಳಿದ ಪೋಸ್ಟ್ ನಲ್ಲೇನಿದೆ?

96
Spread the love

ನ್ಯೂಸ್ ನಾಟೌಟ್ : ಜಸ್ಟಿಸ್​ ಫಾರ್​ ಸೌಜನ್ಯ ಕೂಗು ರಾಜ್ಯದೆಲ್ಲೆಡೆ ಜೋರಾಗಿದೆ. ಪ್ರಕರಣ ನಡೆದು ದಶಕಗಳೇ ಉರುಳಿದರೂ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕುಟುಂಬಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಹೋರಾಟಗಳು ಜೋರಾಗಿವೆ. ಸ್ಯಾಂಡಲ್​ವುಡ್ ಹಲವು​ ನಟರು ಈ ಬಗ್ಗೆ ಮಾತನಾಡಿದ್ದಾರೆ ಮತ್ತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಖ್ಯಾತ ನಟ ದಿವಂಗತ ಟೈಗರ್​ ಪ್ರಭಾಕಾರ್​ ಮಗ ನಟ ವಿನೋದ್​ ಟೈಗರ್​ ಪ್ರಭಾಕರ್​ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.


‘ಮಹೇಶ್ ಶೆಟ್ಟಿ ಸರ್ ನಿಮ್ಮ ಕೆಲಸದ ಮೇಲೆ ನನಗೆ ಅಪಾರ ಗೌರವವಿದೆ, ನಾನು ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನಲ್ಲಿ ಪ್ರಾರ್ಥಿಸುತ್ತೇನೆ.. ಸೌಜನ್ಯ ನ್ಯಾಯ ಕೊಡಲಿ. ಸೌಜನ್ಯಕ್ಕೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳಕ್ಕೆ ಹೋಗುವುದಿಲ್ಲ.’ ಎಂದು ಹೇಳಿಕೊಂಡಿದ್ದಾರೆ.

ಇಂದು (Aug 8) ಬೆಳಗ್ಗೆ ನಿಂತಿಕಲ್ಲಿನಿಂದ ಪ್ರತಿಭಟನೆಗೆ ಚಾಲನೆ ನೀಡಲಾಗಿದ್ದು,ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ವಾಹನ ಜಾಥಾ ಆರಂಭಗೊಂಡಿತು.ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದು,ನಿಂತಿಕಲ್ಲಿನಿಂದ ಹೊರಟ ವಾಹನ ಜಾಥಾ ಪೈಚಾರಿಗೆ ತಲುಪಿ ಅಲ್ಲಿಂದ ನಡಿಗೆಯ ಮೂಲಕ ಸುಳ್ಯಕ್ಕೆ ಆಗಮಿಸಿತು.

https://www.youtube.com/watch?v=-rzfX_xrbaM&t=290s

ಸೌಜನ್ಯಳಿಗೆ ಈ ಬಾರಿ ನ್ಯಾಯ ಸಿಗಲೇ ಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು ಜಸ್ಟೀಸ್ ಫಾರ್ ಸೌಜನ್ಯ ಎಂಬ ಕೂಗು ಮುಗಿಲು ಮುಟ್ಟಿತ್ತು. ಪ್ರತಿಭಟನೆಯಲ್ಲಿ ಜಾತಿ,ಮತ,ಪಂಥ ಭೇಧವಿಲ್ಲದೇ ಎಲ್ಲರೂ ಪಾಲ್ಗೊಂಡು ಈ ಜಾಥಾಕ್ಕೆ ಕೈ ಜೋಡಿಸಿದ್ದಾರೆ ಇದರ ನಡುವೆ ಅನೇಕ ಕನ್ನಡ ಮತ್ತು ಬಹುಭಾಷಾ ನಟರು ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

See also  ಶಿಕ್ಷಕನ ಮೊಬೈಲ್ ​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳ ಫೋಟೋ..! ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್​ ಸಾದಿಕ್ ಬಂಧನ
  Ad Widget   Ad Widget   Ad Widget   Ad Widget   Ad Widget   Ad Widget