ಕರಾವಳಿ

ರಿಯಲ್ ಸ್ಟಾರ್ ಉಪೇಂದ್ರಗೆ  ಉಸಿರಾಟದ ಸಮಸ್ಯೆ

514

ನ್ಯೂಸ್ ನಾಟೌಟ್:  ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರಿಪೇರು ಕಂಡುಬಂದಿದೆ.  ಅವರನ್ನು ನೆಲಮಂಗಳದ ಹರ್ಷ ಆಸ್ಪತ್ರೆಗೆ  ದಾಖಲು ಮಾಡಿದ್ದಾರೆ. ಮೂಗು ಬ್ಲಾಕ್ ಆಗಿ, ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಅಡ್ಮಿಟ್ ಮಾಡಿ  ಚಿಕಿತ್ಸೆ ನೀಡಲಾಗಿದೆ. ಆದರೀಗ ಉಪೇಂದ್ರ ಅವರೆ ಸ್ಪಷ್ಟನೆ ನೀಡುವ ಮೂಲಕ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆತಂಕದಲ್ಲಿದ್ದ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಮಾತು ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.

 ಉಪೇಂದ್ರ ಸದ್ಯ ಯುಐ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲಿಂದಲೇ ಮಾತನಾಡಿದ ಉಪೇಂದ್ರ, “ನಾವು ಮೋಹನ್ ಬಿ ಕೆರೆ ಸ್ಟೋಡಿಯೋದಲ್ಲಿ ಇದ್ದೀವಿ. ಆರಾಮಾಗಿ ಇದ್ದೀನಿ. ಇಲ್ಲಿ ಡಸ್ಟ್ ಜಾಸ್ತಿ ಇತ್ತು. ಹಾಗಾಗಿ ಸ್ವಲ್ಪ ಕಷ್ಟವಾಗಿತ್ತು. ಏನು ಆಗಿಲ್ಲ. ಶೂಟಿಂಗ್ ಮುಂದುವರೆಸಿದ್ದೀವಿ. ಎಲ್ಲರೂ ಇದ್ದಾರೆ ನೋಡಿ” ಎಂದು ಹೇಳಿದ್ದಾರೆ.

See also  ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಚಂಪಾ ಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget