Latestವೈರಲ್ ನ್ಯೂಸ್ಸಿನಿಮಾ

ದಿವಂಗತ ಪುನೀತ್ ರಾಜ್‌ ಕುಮಾರ್ ಜೀವನಾಧಾರಿತ ಚಲನಚಿತ್ರ ಸದ್ಯಕ್ಕೆ ಬೇಡ ಎಂದದ್ದೇಕೆ ಶಿವರಾಜ್‌ ಕುಮಾರ್..? ಇಲ್ಲಿದೆ ಸಂಪೂರ್ಣ ಮಾಹಿತಿ

491

ನ್ಯೂಸ್‌ ನಾಟೌಟ್‌: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ದಿವಂಗತ ಪುನೀತ್ ರಾಜ್‌ ಕುಮಾರ್ ಜೀವನವನ್ನು ಆಧರಿಸಿದ ಚಲನಚಿತ್ರ (ಬಯೋಪಿಕ್) ನಿರ್ಮಾಣದ ಕುರಿತು ಸಾಕಷ್ಟು ಚರ್ಚೆಗಳು ಮತ್ತು ನಿರೀಕ್ಷೆಗಳು ಹರಿದಾಡುತ್ತಿವೆ. ಅಪ್ಪು ಅಭಿಮಾನಿ ಬಳಗವು ತಮ್ಮ ನೆಚ್ಚಿನ ನಟನ ಸ್ಫೂರ್ತಿದಾಯಕ ಜೀವನಗಾಥೆಯನ್ನು ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದೆ.

ಈ ಕುರಿತು ಇದೀಗ ಪುನೀತ್ ಹಿರಿಯ ಸಹೋದರ, ಸೆಂಚುರಿ ಸ್ಟಾರ್ ಡಾ. ಶಿವರಾಜ್‌ ಕುಮಾರ್ ಈ ಬಗ್ಗೆ ಅವರ ಅಭಿಪ್ರಾಯ ಹೇಳಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಘೋಸ್ಟ್’ ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ, ಪತ್ರಕರ್ತರು ಕೇಳಿದ ಪುನೀತ್ ಬಯೋಪಿಕ್ ಕುರಿತ ಪ್ರಶ್ನೆಗೆ ಶಿವರಾಜ್‌ ಕುಮಾರ್ ಉತ್ತರಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪುನೀತ್ ಅವರ ಬಯೋಪಿಕ್ ನಿರ್ಮಿಸುವ ಯಾವುದೇ ಯೋಚನೆ ತಮ್ಮ ಕುಟುಂಬಕ್ಕೆ ಇಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಪುನೀತ್ ನಮ್ಮನ್ನು ಅಗಲಿ ಇನ್ನೂ ಹೆಚ್ಚು ಸಮಯವಾಗಿಲ್ಲ. ಆ ಘಟನೆಯ ಆಘಾತ ಮತ್ತು ನೋವು ನಮ್ಮ ಕುಟುಂಬದಲ್ಲಿ ಇನ್ನೂ ಹಸಿಯಾಗಿಯೇ ಇದೆ.

ನಾವಿನ್ನೂ ಆ ದುಃಖದಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಇಂತಹ ಸಮಯದಲ್ಲಿ ಅವರ ಜೀವನದ ಕಥೆಯನ್ನು ಸಿನಿಮಾ ಮಾಡುವ ಬಗ್ಗೆ ಯೋಚಿಸುವುದು ಅಥವಾ ಮಾತನಾಡುವುದು ತುಂಬಾ ಕಷ್ಟಕರ ಹಾಗೂ ಭಾವನಾತ್ಮಕವಾಗಿ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಪುನೀತ್ ರಾಜ್‌ ಕುಮಾರ್ ಜೀವನ ಕೇವಲ ನಟನೆಗೆ ಸೀಮಿತವಾಗಿರಲಿಲ್ಲ ಎಂಬುದನ್ನು ಹೇಳಿದ ಶಿವರಾಜ್‌ಕುಮಾರ್, “ಅಪ್ಪು ಒಬ್ಬ ನಟನಾಗಿ ಮಾತ್ರವಲ್ಲದೆ, ಯಶಸ್ವಿ ಗಾಯಕ, ನಿರ್ಮಾಪಕ, ಟಿವಿ ನಿರೂಪಕ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಹೃದಯದ ಪರೋಪಕಾರಿ ಮತ್ತು ಸಮಾಜ ಸೇವಕರಾಗಿದ್ದರು ಹೀಗಾಗಿ ಅವರ ಜೀವನವನ್ನು ಸಿನಿಮಾ ಮಾಡುವುದು ಸುಲಭವಲ್ಲ ಎಂದರು.

ಮಧ್ಯಪ್ರದೇಶದ ಸಿಎಂ ಅನ್ನು ಭೇಟಿಯಾದ ನಟ ಯಶ್..! ಖುದ್ದಾಗಿ ಆಹ್ವಾನ ನೀಡಿದ್ದ ಸಿಎಂ

ಕ್ರೈಸ್ತ ಧರ್ಮದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನ, ಕ್ರೈಸ್ತ ಸಮುದಾಯದಲ್ಲಿ ಮಡುಗಟ್ಟಿದ ಶೋಕ

1 ಕೋಟಿ ರೂ. ಬಹುಮಾನ ಘೋಷಿತವಾಗಿದ್ದ ನಕ್ಸಲ್ ನಾಯಕನ ಹತ್ಯೆ..! ಅಮಿತ್ ಶಾ ಹೇಳಿಕೆಯ ಬೆನ್ನಲ್ಲೇ ಘಟನೆ..!

See also  ಉಡುಪಿ: ಬೀಚ್ ಬಳಿ ಯುವಕ ನಾಪತ್ತೆ..! ಬೈಕ್,ಫೋನ್, ಪರ್ಸ್ ಸಮುದ್ರ ತೀರದಲ್ಲಿ ಪತ್ತೆ..! ತೀವ್ರಗೊಂಡ ಹುಡುಕಾಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget