Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್ಸಿನಿಮಾ

ನಟ ಶಾರುಖ್ ಖಾನ್ ಪತ್ನಿಯ ಒಡೆತನದ ರೆಸ್ಟೋರೆಂಟ್ ​ನಲ್ಲಿ ನಕಲಿ ಪನ್ನೀರ್..? ವಿಡಿಯೋ ವೈರಲ್ ಆದ ಬಳಿಕ ರೆಸ್ಟೋರೆಂಟ್ ನಿರ್ವಾಹಕರು ಹೇಳಿದ್ದೇನು..?

575

ನ್ಯೂಸ್ ನಾಟೌಟ್: ನಟ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಹಲವು ರೀತಿಯ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಗೌರಿ ಖಾನ್ ಇಂಟೀರಿಯರ್ ಡಿಸೈನ್ ಮಾಡುತ್ತಾರೆ. ರೆಸ್ಟೋರೆಂಟ್ ಉದ್ಯಮವನ್ನೂ ನಡೆಸುತ್ತಿದ್ದಾರೆ.

ಅವರು ಮುಂಬೈನ ಬಾಂದ್ರಾದಲ್ಲಿ ‘ಟೋರಿ’ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ. ಸಾವಿರಾರು ರೂಪಾಯಿ ಬಿಲ್ ಹಾಕುವ ಈ ರೆಸ್ಟೋರೆಂಟ್ ​ನಲ್ಲಿ ನಕಲಿ ಪನ್ನೀರ್ ಬಳಕೆ ಮಾಡುತ್ತಿರುವ ಆರೋಪ ಎದುರಾಗಿದೆ.

ಸಾರ್ಥಕ್ ಹೆಸರಿನ ವ್ಯಕ್ತಿ ಇತ್ತೀಚೆಗೆ ಐಷಾರಾಮಿ ಹೋಟೆಲ್ ​ಗಳಿಗೆ ಭೇಟಿ ನೀಡಿ ಆಯೋಡಿನ್ ಟಿಂಚರ್ ಅನ್ನು ಪನ್ನೀರ್ ಮೇಲೆ ಹಾಕಿ ಪ್ರಯೋಗ ಮಾಡುತ್ತಿದ್ದಾರೆ. ಈ ಟಿಂಚರ್ ಬಿದ್ದ ಪನೀರ್ ಅದೇ ಕಲರ್ ಉಳಿಸಿಕೊಂಡರೆ ಅದು ನಿಜವಾದ ಪನ್ನೀರ್ ಎಂದರ್ಥ. ಆದರೆ, ಪನೀರ್ ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ನಕಲಿ ಪನೀರ್ ಎಂದರ್ಥ ಎಂಬುದು ಸಾರ್ಥಕ್ ಹೇಳಿದ್ದಾರೆ.

ಸಾರ್ಥಕ್ ಮೊದಲು ವಿರಾಟ್ ಕೊಹ್ಲಿ ಒಡೆತನದ ಹೋಟೆಲ್ ​ಗೆ ತೆರಳಿದ್ದಾರೆ. ಆ ಬಳಿಕ ಶಿಲ್ಪಾ ಶೆಟ್ಟಿ ಮತ್ತು ಬಾಬಿ ಡಿಯೋಲ್ ಒಡೆತನದ ರೆಸ್ಟೋರೆಂಟ್ ​ಗಳಲ್ಲೂ ಪನ್ನೀರ್ ​ನ ಪರಿಶೀಲಿಸಿದ್ದಾರೆ. ಇಲ್ಲಿ ಒರಿಜಿನಲ್ ಪನ್ನೀರ್ ಸಿಕ್ಕಿದೆ. ಆದರೆ, ಗೌರಿ ಖಾನ್ ಒಡೆತನದ ಟೋರಿ ರೆಸ್ಟೋರೆಂಟ್ ​ನಲ್ಲಿ ನಕಲಿ ಅಥವಾ ಕಳಪೆ ಗುಣಪಟ್ಟದ ಪನ್ನೀರ್ ಸಿಕ್ಕಿದೆ ಎನ್ನಲಾಗಿದೆ. ಏಕೆಂದರೆ ಪನ್ನೀರ್ ಮೇಲೆ ಆಯೋಡಿನ್ ಟಿಂಚರ್ ಹಾಕುತ್ತಿದ್ದಂತೆ ಅದು ಬಣ್ಣ ಬದಲಿಸಿದೆ.

 

View this post on Instagram

 

A post shared by Sarthak Sachdeva (@sarthaksachdevva)

‘ಅಯೋಡಿನ್ ಪರೀಕ್ಷೆಯು ಪನ್ನೀರ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಅವರಿಗೆ ನೀಡಿದ ಆಹಾರವು ಸೋಯಾ ಆಧಾರಿತ ಪದಾರ್ಥಗಳನ್ನು ಹೊಂದಿತ್ತು. ಹೀಗಾಗಿ, ಟಿಂಚರ್ ಆ ರೀತಿ ಪ್ರತಿಕ್ರಿಯಿಸಿದೆ. ಇದು ನಿರೀಕ್ಷಿತವಾದದ್ದು. ನಾವು ಇಲ್ಲಿ ನಕಲಿ ಪನ್ನೀರ್ ಬಳಕೆ ಮಾಡಿಲ್ಲ’ ಎಂದು ಟೋರಿ ರೆಸ್ಟೋರೆಂಟ್ ಹೇಳಿದೆ.  

 

See also  ಹೆಂಡತಿಯ ಎದುರೇ ಗಂಡನ ಶಿರಚ್ಛೇದ ಮಾಡಿ ತಲೆ ತೆಗೆದುಕೊಂಡು ಪರಾರಿ..! ದೇವಸ್ಥಾನದ ಬಳಿ ರುಂಡ ಪತ್ತೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget