Latestಕರಾವಳಿಸಿನಿಮಾ

ಡಿವೈನ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ!!ಐಷಾರಾಮಿ ಕಾರಿಗೆ ರಿಷಬ್ ಶೆಟ್ಟಿ ಕುಟುಂಬದಿಂದ ಭರ್ಜರಿ ಸ್ವಾಗತ!!ಇದರ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?!

822

 ನ್ಯೂಸ್‌ ನಾಟೌಟ್: ಸ್ಯಾಂಡಲ್ ವುಡ್ ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.ಈ ಮೂಲಕ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸದ್ಯ ಕಾಂತಾರ 1 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ ಅವರು ಹೊಚ್ಚ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.ಹೊಸ ಕಾರು ಅಂದ ಕೂಡಲೇ ಕಾರು ಯಾವುದು? ಅದರ ಬೆಲೆ ಎಷ್ಟು ಅನ್ನೋದರ ಬಗ್ಗೆ ರಿಷಬ್ ಶೆಟ್ಟಿ ಅಭಿಮಾನಿಗಳಿಮದ ಹುಡುಕಾಟ ಆರಂಭವಾಗಿದೆ.

ಯಾವ ಕಾರು?

ರಿಷಬ್ ಶೆಟ್ಟಿ ಅವರು ಟೊಯೋಟಾ ಕಂಪನಿಯ ಕಪ್ಪು ಬಣ್ಣದ ವೆಲ್ಫೈರ್ ದುಬಾರಿ ಕಾರನ್ನು ಖರೀದಿಸಿದ್ದು, ಟೊಯೋಟಾ ಕಂಪನಿ ಈ ಕಾರಿನ ಬೆಲೆ ಸದ್ಯದ ದರ 1 ಕೋಟಿ 22 ಲಕ್ಷದಿಂದ 1 ಕೋಟಿ 32 ಲಕ್ಷ ರೂಪಾಯಿಯವರೆಗೂ ಇದೆ. ಆನ್ ರೋಡ್‌ಗೆ ಈ ದುಬಾರಿ ಕಾರಿನ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಎನ್ನಲಾಗಿದೆ.ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋ ಜತೆಗೆ ಸುದ್ದಿ ವೈರಲ್ ಆಗುತ್ತಿದೆ.

ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಲ್ಲಿ ನಡೆದ ವಾರಾಹಿ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿದ್ದರು. ನೇಮಕ್ಕೆ ಬಂದು ದೈವದ ಬಳಿ ಬೇಡಿಕೊಂಡಿದ್ದ ರಿಷಬ್ ಶೆಟ್ಟಿ ಅವರಿಗೆ ಪಂಜುರ್ಲಿ ಅಭಯ ನೀಡಿತ್ತು.ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ಅವರಿಗೆ ನಿನಗೆ ಜಗತ್ತಿನೆಲ್ಲೆಡೆ ದುಶ್ಮನ್‌ಗಳಿದ್ದಾರೆ. ನಿನ್ನ ಸಿನಿಮಾ ಎಂಬ ಸಂಸಾರವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ.ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ. ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ದೈವ ಅಭಯ ನೀಡಿತ್ತು.

See also  ಉಡುಪಿ: ನಮಾಜ್ ಮಾಡುತ್ತಿರುವಾಗಲೇ ಹೃದಯಾಘಾತ..! ಇಲ್ಲಿದೆ ಮನಕಲಕೋ ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget