ಕ್ರೈಂಸಿನಿಮಾ

ನಟ ರಕ್ಷಿತ್ ಶೆಟ್ಟಿಗೆ ಕಾಪಿರೈಟ್ ಉಲ್ಲಂಘನೆ ಕೇಸ್ ನಲ್ಲಿ 20 ಲಕ್ಷ ರೂ. ಠೇವಣಿ ಇಡುವಂತೆ ಹೈಕೋರ್ಟ್ ಆದೇಶ..! ಮಾತುಕತೆ ಮುರಿದು ಕಾನೂನು ಹೋರಾಟಕ್ಕೆ ಮುಂದಾದ ನಟನಿಗೆ ಭಾರಿ ಹಿನ್ನಡೆ..!

239

ನ್ಯೂಸ್‌ ನಾಟೌಟ್‌: ನಟ ರಕ್ಷಿತ್ ಶೆಟ್ಟಿ MRT Music ಕಂಪನಿಯ ಮಾಡಿರುವ ಕಾಪಿ ರೈಟ್ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಆದೇಶಿಸಿದೆ. ರಕ್ಷಿತ್ ಶೆಟ್ಟಿ ಪರಂವಾ ಸ್ಟುಡಿಯೋಸ್ ನಿರ್ಮಿಸಿದ್ದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ‘ನ್ಯಾಯ ಎಲ್ಲದೆ’ ಹಾಡನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪವಿದೆ.

ನವೀನ್ ಕುಮಾರ್ ಪ್ರತಿನಿಧಿಸಿರುವ MRT ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು…’ ಹಾಡುಗಳನ್ನು ಸರಿಯಾದ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ಪ್ರತಿಪಾದಿಸಿದರು. ಈ ದೂರಿನ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 63ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಮನ್ಸ್ ನೀಡಿದರೂ ರಕ್ಷಿತ್ ಶೆಟ್ಟಿ ದೆಹಲಿ ಹೈಕೋರ್ಟ್‌ಗೆ ಹಾಜರಾಗಿರಲಿಲ್ಲ. ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ಆದೇಶ ನೀಡಿದ್ದಲ್ಲದೆ, ಹಾಡನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಹಾಕುವಂತೆ ಸೂಚಿಸಿದೆ.
ರಕ್ಷಿತ್ ಶೆಟ್ಟಿ ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಯಲ್ಲಿ ಎದುರಿಸಿದ್ದಾರೆ. ಅಲ್ಲದೆ ಕಾನೂನು ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Click

https://newsnotout.com/2024/08/drunk-bengaluru-auto-rikshaw-kannada-news-viral-protest/
https://newsnotout.com/2024/08/govt-bus-and-car-collision-kannada-news-gadaga-viral-news/
See also  ಉಡುಪಿಗೆ ಬಂದ ಭೂಗತ ಪಾತಕಿ ಬನ್ನಂಜೆ ರಾಜಾ..! 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವಾತನಿಗೆ 12 ದಿನ ಪೆರೋಲ್ ರಜೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget