ನ್ಯೂಸ್ ನಾಟೌಟ್: ಕಿಚ್ಚ ಸುದೀಪ್ ಅವರು ಮತ್ತೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಅನ್ಸುತ್ತೆ.ಹೀಗಾಗಿ ಅವರು ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಕನ್ನಡ ನಟ ಕಿಚ್ಚ ಸುದೀಪ್ ಅವರು ʼಮ್ಯಾಕ್ಸ್ʼ ಸಿನಿಮಾ ಹಿಟ್ ಆದ ಬಳಿಕ ಕ್ರಿಕೆಟ್‌ನತ್ತ ಮುಖ ಮಾಡಿದರು. ಸೆಲೆಬ್ರೀಟ್ ಲೀಗ್‌ನಲ್ಲಿ ಆಡಿದ್ದರು. ಈಗ ಮತ್ತೆ ಅವರು ಸಿನಿಮಾದತ್ತ ಗಮನ ಕೊಡುತ್ತಿದ್ದಾರೆ. ಹೀಗಾಗಿ ಅವರು ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡಬಹುದು ಎಂದು ಕಾಣುತ್ತದೆ.
ಕಿಚ್ಚ ಸುದೀಪ್ ಅವರು ಈ ಬಾರಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ? ಏನು ಕತೆ ಎಂದು ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಲ್ಲಿದ್ದಾರೆ. ಕನ್ನಡ ನಟ ಕಿಚ್ಚ ಸುದೀಪ್ ಅವರು ʼಪೈಲ್ವಾನ್ʼ ಸಿನಿಮಾ ನಂತರದಲ್ಲಿ ಫಿಟ್ ನೆಸ್ ಕಡೆಗೆ ಗಮನ ಕೊಡಲು ಆರಂಭಿಸಿದರು. ʼಪೈಲ್ವಾನ್ʼ ಸಿನಿಮಾಕ್ಕೋಸ್ಕರ ಕಿಚ್ಚ ಸುದೀಪ್ ಅವರು ಭಾರೀ ತಯಾರಿ ಮಾಡಿದ್ದರು. ಇನ್ನು ʼಬಿಗ್ ಬಾಸ್ ಕನ್ನಡʼ ಶೋ ನಿರೂಪಣೆ ಮಾಡೋದಿಲ್ಲ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದರು. ಆದರೂ ಕೂಡ ವಾಹಿನಿಯೇ ಈ ಬಗ್ಗೆ ಮತ್ತೆ ಒಪ್ಪಿಸಲು ಟ್ರೈ ಮಾಡಲಿದೆಯಂತೆ . ಒಟ್ಟಿನಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ನಿರೂಪಣೆ ಮಾಡುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ