ಕ್ರೈಂರಾಜಕೀಯವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ನಟ ಜಗ್ಗೇಶ್..! ಅವನ ಪಾಪಕರ್ಮ ಅವನನ್ನು ಸುಡುತ್ತದೆ ಎಂದ ನವರಸ ನಾಯಕ..!

83
Spread the love

ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್ ಪರೋಕ್ಷವಾಗಿ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಎಕ್ಸ್‌ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, “ಸರ್ವ ಆತ್ಮಾನೇ ನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ! ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನನ್ನು ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲಾ. ಎಲ್ಲಾ ಕರ್ಮಕ್ಕು ತಕ್ಷಣ ಪಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲ! ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಗರಂ ಆಗಿದ್ದರು ಮತ್ತು ಅವರನ್ನು ಸತ್ತುವರಿದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ ಇತರೆ‌ 13 ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಸ್ಥಳ ಮಹಜರಿಗಾಗಿ ಕೊಲೆ ನಡೆದ ಶೆಡ್ಡಿಗೆ ಕರೆತರಲಾಗಿದೆ. ಪವಿತ್ರಾಗೌಡ ಅವರನ್ನು ನಿಮ್ಹಾನ್ಸ್‌ ಬಳಿಯ ಮಹಿಳಾ ಸಾಂತ್ವನ‌ ಕೇಂದ್ರದಲ್ಲಿ ‌ಇರಿಸಲಾಗಿತ್ತು.

Click 👇

https://newsnotout.com/2024/06/darshan-case-they-demands-a-lot-under-police-custody
https://newsnotout.com/2024/06/fir-on-darshan-forest-department-kannada-news
https://newsnotout.com/2024/06/anupam-agarwal-reacts-on-mangaluru-vijayothsava-issue
https://newsnotout.com/2024/06/darshan-pavithra-gowda-kannada-issue-renuka-swami-message
https://newsnotout.com/2024/06/vijaya-lakshmi-darshan-insta-unfollowed-by-wife
See also  ಸಂಸದ ಪ್ರತಾಪ್‌ಸಿಂಹ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಹೆಡ್ ಕಾನ್‌ಸ್ಟೆಬಲ್​ ಅಮಾನತು
  Ad Widget   Ad Widget   Ad Widget   Ad Widget   Ad Widget   Ad Widget