ಕೇರಳ: ಖ್ಯಾತ ಮಲಯಾಳಂ ಹಾಸ್ಯ ನಟ ಗಿನ್ನೆಸ್ಸ್ ಪಕ್ರು ಅಲಿಯಾಸ್ ಅಜಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಥಿರುವಲ್ಲ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ನಟ ಗಿನ್ನೆಸ್ಸ್ ಪಕ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಹೋದ ಲಾರಿ ಎದುರು ಬರುತ್ತಿದ್ದ ಗಿನ್ನೆಸ್ಸ್ ಪಕ್ರು ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಘಟನೆ ಸಂಬಂಧ ಥಿರುವಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.