ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್ಸಿನಿಮಾ

ನಟ ದುನಿಯಾ ವಿಜಯ್ ನಿಂದ ಸಹಾಯ ಪಡೆದು ಜೈಲಿಂದ ಬಿಡುಗಡೆಯಾಗಿದ್ದವನಿಂದ ಜೋಡಿ ಕೊಲೆ..! ಏನಿದು ಘಟನೆ..?

214

ನ್ಯೂಸ್ ನಾಟೌಟ್: ಈ ಹಿಂದೆ ಡಬಲ್ ಮರ್ಡರ್ ಕೇಸ್ ಹಾಗು ರೇಪ್‌ ಕೇಸಲ್ಲಿ ಜೈಲು ಸೇರಿದ್ದ ಸುರೇಶ್ ಎಂಬಾತ​ ಈಗ ಮತ್ತೆ ಎರಡು ಕೊಲೆ ಮಾಡಿದ್ದಾನೆ. ನಟ ದುನಿಯಾ ವಿಜಯ್ ಅವರೇ ಹಣ ಕೊಟ್ಟು ಸುರೇಶ್ ​ನ ಹೊರಕ್ಕೆ ಕರೆ ತಂದಿದ್ದರು.

ಸುರೇಶ್ ಕೊಲೆ ಹಾಗೂ ರೇಪ್ ಕೇಸ್​ನಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದ. ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ದುನಿಯಾ ವಿಜಯ್ ಶ್ಯೂರಿಟಿ ಹಣ ಕೊಟ್ಟಿದ್ದರು. ಈ ವೇಳೆ ಸುರೇಶ್ ​ಗೂ ಕೂಡ ಮೂರು ಲಕ್ಷ ರೂಪಾಯಿ ಶ್ಯೂರಿಟಿ ಹಣ ನೀಡಿದ್ದರು. ಈ ಮೂಲಕ ಸುರೇಶ್ ​ನ ಹೊರ ತಂದಿದ್ದರು.

ಜೈಲಿಂದ ಬಿಡುಗಡೆ ಆದ ಬಳಿಕ ಸುರೇಶ್ ಬದಲಾಗಿದ್ದ. ಮಾರ್ಕೆಟ್ ​ನಲ್ಲಿ ಕೊತ್ತುಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಾ ಇದ್ದ. ಸುರೇಶ್ ಸಂಬಂಧಿಯಿಂದ ಶೆಡ್ ​ನಲ್ಲಿ ಕೆಲಸ ಪಡೆದುಕೊಂಡಿದ್ದ. ಆದರೆ, ಈಗ ಆತ ಕೊಲೆ ಮಾಡಿ ಮತ್ತೆ ಜೈಲು ಸೇರುವಂತಾಗಿದೆ.

ಬೆಂಗಳೂರಿನ ಹೊರ ವಲಯದಲ್ಲಿ (ನವೆಂಬರ್ 8) ರಾತ್ರಿ ಜೋಡಿ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾದವರು ಎಂದು ಗುರುತಿಸಲಾಗಿದೆ. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಎಂದು ಸುರೇಶ್ ​ಗೆ ಹೀಯಾಳಿಸಿದ್ದರು. ಇದರಿಂದ ಸಿಟ್ಟಾದ ಸುರೇಶ್ ಕೊಲೆಗೈದಿದ್ದಾನೆ ಎನ್ನಲಾಗಿದೆ.

Click

https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
https://newsnotout.com/2024/11/actor-duniya-vijaya-kannada-news-jail-issue-bail-matter-fjf/
See also  ಕಾಳಸಂತೆಯಲ್ಲಿ ಶವಗಳ ಅಂಗಾಂಗ ಮಾರಾಟ..! ತಪ್ಪೊಪ್ಪಿಕೊಂಡ ಹಾರ್ವರ್ಡ್‌ ವೈದ್ಯಕೀಯ ಕಾಲೇಜಿನ ವ್ಯವಸ್ಥಾಪಕ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget