ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ , ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಜಾಮೀನು ಭವಿಷ್ಯ ಇಂದು (ಜು.22) ರಂದು ನಿರ್ಧಾರವಾಗುವ ಸಾಧ್ಯತೆ ಇತ್ತು. ಈಗಾಗಲೇ ಸರ್ಕಾರದ ಪರ ವಿಚಾರಣೆ ನಡೆಸಿರುವ ಸುಪ್ರಿಂ ಕೋರ್ಟ್ ಇಂದು ದರ್ಶನ್ ಸೇರಿ 7 ಆರೋಪಿಗಳ ಪರ ವಾದ ಆಲಿಸಬೇಕಾಗಿತ್ತು. ಆದರೆ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಗುರುವಾರ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ ಎಂದು ತಿಳಿದು ಬಂದಿದೆ.ಹೀಗಾಗಿ ದರ್ಶನ್ ಜಾಮೀನು ಭವಿಷ್ಯ ತುಂಬಾನೇ ಕುತೂಹಲ ಮೂಡಿಸಿದೆ.
ಸದ್ಯ ಥಾಯ್ಲೆಂಡ್‍ನಲ್ಲಿ ನಾಲ್ಕು ದಿನಗಳಿಂದ ದರ್ಶನ್ ನಟನೆಯ ಡೆವಿಲ್ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಕುಟುಂಬ ಸಮೇತ ಥಾಯ್ಲೆಂಡ್‍ಗೆ ತೆರಳಿರುವ ದರ್ಶನ್, ಚಿತ್ರೀಕರಣ ಮುಗಿದ ನಂತರ ನಾಲ್ಕೈದು ದಿನ ಅಲ್ಲೇ ಇದ್ದು, ಜುಲೈ 25ರ ನಂತರ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ. ಬೇಸರಗೊಂಡ ದರ್ಶನ್ ತನ್ನ ಆಪ್ತರೊಟ್ಟಿಗೆ ಸೇರಿ ರೇಣುಕಾಸ್ವಾಮಿ ಅಪಹರಣ ಮಾಡಿ, ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ನಟ ಸೇರಿ 17 ಆರೋಪಿಗಳನ್ನು ಜೂನ್ 11 ರಂದು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನ ಹಿನ್ನೆಲೆ 6 ತಿಂಗಳು ಜೈಲಿ ವಾಸದ ಬಳಿಕ ಜಾಮೀನಿನ ಮೇಲೆ ನಟ ಹಾಗೂ ಇತರೆ ಆರೋಪಿಗಳು ಬಿಡುಗಡೆಯಾಗಿದ್ದರು.