Latestಕ್ರೈಂಸಿನಿಮಾ

ನಟ ದರ್ಶನ್ ಜಾಮೀನು ಷರತ್ತು ಸಡಿಲಿಕೆ..! ದೇಶಾದ್ಯಂತ ಸಂಚರಿಸಲು ಹೈಕೋರ್ಟ್ ಒಪ್ಪಿಗೆ..!

830

ನ್ಯೂಸ್‌ ನಾಟೌಟ್ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅದರಲ್ಲಿ ದರ್ಶನ್ ಬೆಂಗಳೂರು ಬಿಟ್ಟು ಹೊರಹೋಗಬೇಕಾದರೆ ಕೋರ್ಟ್ ಅನುಮತಿ ಪಡೆಯಬೇಕಿತ್ತು. ಈಗ ಹೈಕೋರ್ಟ್ ಆ ನಿಯಮಗಳನ್ನು ಸಡಿಲಿಸಿದೆ.

ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್​​ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು.

ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಆದರೂ, ಹೈಕೋರ್ಟ್ ದರ್ಶನ್​ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ದೇಶಾದ್ಯಂತ ಸಂಚಾರ ಮಾಡಬಹುದು, ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೇಳುವ ಮೂಲಕ ಬಿಗ್ ರಿಲೀಫ್ ನೀಡಿದೆ ಎನ್ನಲಾಗಿದೆ.

ಜಾಮೀನು ಷರತ್ತುಗಳ ಪ್ರಕಾರ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರ 15 ಆರೋಪಿಗಳು ಫೆಬ್ರವರಿ 25 ರಂದು ಬೆಂಗಳೂರು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ಇತರ ಆರೋಪಿಗಳು ಪೊಲೀಸರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

See also  ಮಡಿಕೇರಿ: ದೇವರಕೊಲ್ಲಿ ಬಳಿ ಭೀಕರ ಅಪಘಾತ..! ಇಬ್ಬರಿಗೆ ಗಂಭೀರ ಗಾಯ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget