ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್ ನ ಖೈದಿ ನಂಬರ್ 6106 ಈಗ ಟ್ರೆಂಡಿಂಗ್..! ಬೈಕ್ ಕಾರು ಆಟೋ ಮೇಲೆಲ್ಲಾ ಸ್ಟಿಕ್ಕರ್..! ಜೈಲಿನಿಂದಲೇ ದಾಸ ಅಭಿಮಾನಿಗಳಿಗೆ ಬರೆದ ಪತ್ರದಲ್ಲೇನಿದೆ..?

265

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೇಸ್‌ ನಲ್ಲಿ ಸ್ಯಾಂಡಲ್‌ವುಡ್ ನ ಚಾಲೆಂಜಿಗ್ ಸ್ಟಾರ್ ನಟ ದರ್ಶನ್ ಆರೋಪಿಯಾಗಿ ಜೈಲಿನಲ್ಲಿ ಇರುವ ವೇಳೆ ಅವರಿಗೆ ಈಗಾಗಲೇ ಸಂಪರ್ಕದಲ್ಲಿದ್ದ ರೌಡಿಗಳು ಮತ್ತು ಬೇರೆ ರೌಡಿಗಳು ಜೈಲಿನೊಳಗೆ ದಾಸನಿಗೆ ವಿಶೇಷ ವ್ಯವಸ್ಥೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ನಟ ದರ್ಶನ್‌ ಖೈದಿ ನಂಬರ್‌ 6106 ಎಂಬುದು ಎಲ್ಲರಿಗೂ ಗೊತ್ತಾಗಿದ್ದು, ಈ ಸಂಖ್ಯೆ ಈಗ ಟ್ರೆಂಡ್ ಆಗುತ್ತಿದೆ.

ಇದೀಗ, 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಂಗಳೂರು, ರಾಯಚೂರು, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ನಲ್ಲಿ ಕೈದಿ ನಂಬರ್ ಅನ್ನು ಸ್ಟಿಕ್ಕರ್ ಮಾಡಿ ಅಂಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಗಾಡಿಗಳ ಮೇಲು ಕೈದಿ ನಂ.6106 ಎಂದು ಅಂಟಿಸಿಕೊಳ್ಳುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ‘ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಇವೆಲ್ಲ ಆಗುವುದು ಬೇಡ. ಆದ್ರಲ್ಲು ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದ ಬಗ್ಗೆ, ಭೇಟಿಯಾದಲು ಅಸಾಧ್ಯವಾದ ಬಗ್ಗೆ ಬೇಸರವಾಗಿದೆ’ ಎಂದು ನಟ ದರ್ಶನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದರು. ದೂರದ ಗುಲ್ಬರ್ಗಾದಿಂದ ತ್ರಿ-ವೀಲರ್ ಬೈಕ್ ನಲ್ಲಿ ಆಗಮಿಸಿದ್ದರು ಎನ್ನಲಾಗಿದೆ.

Click 👇

https://newsnotout.com/2024/06/drupadi-murmu-kannada-news-healthcare-from-govt-announced-by-president
https://newsnotout.com/2024/06/sea-flood-issue-ullala-house-collapsed-kannada-news-sea-bank-slide
See also  ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಗೊಂಬೆ ಹಬ್ಬ, ಸಾರ್ವಜನಿಕರಿಗೆ ವೀಕ್ಷಿಸಲು ಮೂರು ದಿನಗಳ ಅವಕಾಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget